ಕಾಸರಗೋಡು: ಜಿಲ್ಲಾ ಯೋಜನಾ ಕಛೇರಿಯಲ್ಲಿ ನಾಲ್ಕು ತಿಂಗಳಿಗೆ ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯ ನೇಮಕಾತಿ ನಡೆಸಲಾಗುವುದು. ಪ್ಲಸ್ ಟು ಉತ್ತೀರ್ಣರಾಗಿರುವ ಮತ್ತು ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಆರು ತಿಂಗಳಿಗಿಂತ ಕಡಿಮೆಯಿಲ್ಲದ ಡಾಟಾ ಎಂಟ್ರಿ ಆಪರೇಟರ್ ಕೋರ್ಸ್‍ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು. ಮಲಯಾಳ, ಇಂಗ್ಲೀಷ್ ಟೈಪಿಂಗ್ ತಿಳಿದಿರಬೇಕು. ಅಡೋಬ್ ಪೇಜ್ ಮೇಕರ್ ಕೆಲಸದ ಅನುಭವ, ಬಿ.ಸಿ.ಎ, ಬಿಟೆಕ್ ಇನ್ ಕಂಪ್ಯೂಟರ್ ಸಯನ್ಸ್ ಗೆ ಆದ್ಯತೆ. ಆಸಕ್ತ ಉದ್ಯೋಗಾರ್ಥಿಗಳು ಬಯೋಡೇಟಾ, ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ಜನವರಿ 7ರ ಮೊದಲು ಜಿಲ್ಲಾ ಯೋಜನಾ ಕಚೇರಿಗೆ ನೇರವಾಗಿ ಅಥವಾ ಅಂಚೆಯ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.