HEALTH TIPS

ಬಿಸಿ ನೀರಿನಿಂದ ತಲೆಸ್ನಾನ ಮಾಡುತ್ತೀರಾ? ತಿಳಿಯಲೇಬೇಕಾದ ವಿಚಾರವಿದು..!!

Top Post Ad

Click to join Samarasasudhi Official Whatsapp Group

Qries

 ನೀವು ಈ ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನವನ್ನು ಎಂಜಾಯ್ ಮಾಡುತ್ತಿರಬಹುದು, 10 ನಿಮಿಷದ ಇಮ್ಮ ಸ್ನಾನದ ಸಮಯವನ್ನು 20 ನಿಮಿಷ ಮಾಡಿರಬಹುದು. ಚಳಿಯಲ್ಲಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುವುದು ಎಲ್ಲರು ಇಷ್ಟಪಡುವ ಕೆಲಸ. ಬಿಸಿ ನೀರು ನಮ್ಮ ದೇಹಕ್ಕೆ ಮುದ ನೀಡಿದರೂ ಇದರಿಂದ ಹಾನಿ ಇದೆ ಎಂಬುದನ್ನು ನೀವು ಮರೆಯಬಾರದು.

ಹೌದು ಬಿಸಿ ನೀರಿನ ಸ್ನಾನವು ನಮಗೆ ಒಳ್ಳೆಯ ಫಲಿತಾಂಶ ನೀಡುವುದಿಲ್ಲ. ಅದರಲ್ಲೂ ಬಿಸಿ ನೀರಿನಿಂದ ತಲೆ ಸ್ನಾನ ಮಾಡುವುದು ಅತೀ ಹೆಚ್ಚು ಕೂದಲು ಸಮಸ್ಯೆಗೆ ಕಾರಣವಾಗುತ್ತೆ ಎಂಬ ಅಚ್ಚರಿಯ ವಿಚಾರ ನಿಮಗೆ ಗೊತ್ತಾ? ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದರೆ ಚಳಿಯಲ್ಲಿ ನೆಮ್ಮದಿ ಸಿಗುತ್ತದೆ ಎಂದು ನೀವು ಹೊಗೆಯಾಡುವಷ್ಟು ಬಿಸಿಯಾದ ನೀರಿನಿಂದ ಸ್ನಾನ ಮಾಡುತ್ತಿರಬಹುದು.

ಆದ್ರೆ ಈ ಬಿಸಿ ನೀರು ನಿಮ್ಮ ಕೂದಲಿನ ವಿನಾಶಕ್ಕೆ ಕಾರಣವಾಗುತ್ತಿದೆ. ಅದು ಒಂದೇ ದಿನದಲ್ಲಿ ಉಂಟಾಗುವ ಪ್ರಕ್ರಿಯೆ ಅಲ್ಲ, ಅಥವಾ ಒಂದು ದಿನ ಬಿಸಿ ನೀರಿನಲ್ಲಿ ಸ್ನಾನ ಮಾಡೋದ್ರಿಂದ ಆಗುವ ಪರಿಣಾಮವಲ್ಲ. ಹಾಗಾದ್ರೆ ಬಿಸಿ ನೀರಿನಿಂದ ತಲೆ ಸ್ನಾನ ಮಾಡಿದ್ರೆ ಏನಾಗುತ್ತೆ? ಅದರ ಪ್ರಭಾವ ಯಾವ ರೀತಿ ಕಾಣಿಸಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ನಮ್ಮ ತಲೆ ಮೇಲಿನ ಪದರವು ಎಣ್ಣೆಯ ಅಂಶವನ್ನು ತನ್ನಲ್ಲಿ ಹಿಡಿದುಕೊಂಡಿರುತ್ತದೆ. ಆದ್ರೆ ಬಿಸಿ ನೀರಿನ ಸ್ನಾವು ಈ ಅಂಶವನ್ನು ತೆಗೆಯಲು ಕಾರಣವಾಗುತ್ತದೆ. ಇದೊಂದು ನೈಸರ್ಗಿಕ ರೀತಿಯ ಆಯಿಲ್ ಆಗಿರಲಿದೆ. ಆದ್ರೆ ಈ ಅಂಶ ನಮ್ಮ ತಲೆ ಮೇಲಿನ ಪದರದಿಂದ ನಾಶವಾಗುತ್ತದೆ. ಇದು ತಲೆಯಲ್ಲಿ ಹೊಟ್ಟು ಉಂಟಾಗಲು ಕಾರಣವಾಗಬಹುದು.

ಈ ಅಂಶ ತಲೆಯಿಂದ ಹೊರಟು ಹೋಗುವುದರಿಂದ ನಿಮ್ಮ ಕೂದಲು ಒಣಗುತ್ತದೆ, ಬಿರುಕು ಉಂಟಾಗುತ್ತದೆ ಮತ್ತು ನಂತರದ ದಿನಗಳಲ್ಲಿ ಸೀಳುವುದು, ಅರ್ಧಕ್ಕೆ ತುಂಡಾಗುವುದು, ಮೊಂಡಾಗುವುದು ನೋಡಬಹುದು. ಇದಕ್ಕೆ ಬಿಸಿ ನೀರಿನ ಸ್ನಾನವೂ ಒಂದು ಕಾರಣವಾಗಿರಲಿದೆ. ಅದರಲ್ಲೂ ನೀವು ಕೂದಲಿಗೆ ಕಲರಿಂಗ್ ಮಾಡಿದ್ದರೆ ಬಿಸಿ ನೀರಿನ ಸ್ನಾನವು ವಿನಾಶಕ್ಕೆ ಸುಲಭ ದಾರಿ ಮಾಡಿಕೊಡಲಿದೆ.

ನಿಮ್ಮ ಕೂದಲು ಬಣ್ಣ ಕಳೆದುಕೊಳ್ಳುವುದು, ಶೈನಿಂಗ್ ಕಡಿಮೆಯಾಗುವುದು, ಕೂದಲಿನ ಬುಡ ದುರ್ಬಲವಾಗಲು ಕೂಡ ಇದು ಕಾರಣವಾಗಬಹುದು. ಹಾಗೆ ನಿಮ್ಮ ನೆತ್ತಿಯ ಮೇಲೆ ಬಿಸಿ ನೀರು ಬೀಳುವುದರಿಂದ ಬೇಗ ಒಣಗಿದಂತೆ ಅನುಭವವಾಗಬಹುದು, ಇದರಿಂದ ನಿಮ್ಮ ನೆತ್ತಿ ಮೇಲಿನ ಕೂದಲು ಬಹುಬೇಗ ಉದುರಲು ಆರಂಭಿಸಬಹುದು. ಬಹಳ ಹೀಟ್‌ನಿಂದಾಗಿ ಮೇಲ್ಪದರ ಒಣಗಿ ಹೊಟ್ಟು ಕಾಣಿಸಿಕೊಳ್ಳುವುದು ಕೂಡ ನೋಡಬಹುದು.

ಶಾಖದಿಂದಾಗಿ ನೆತ್ತಿ ಒಣಗುವುದು, ತುರಿಕೆ, ಸಿಪ್ಪೆ ಸುಲಿಯುವುದು ಉಂಟಾಗಬಹುದು. ಹಾಗೆ ತಲೆಯ ಮೇಲ್ಪದರ ಒಣಗಿರುವುದನ್ನು ತಡೆಯಲು ನಿಮ್ಮ ದೇಹ ಅಗತ್ಯಕ್ಕಿಂತ ಹೆಚ್ಚು ಎಣ್ಣೆಯನ್ನು ಉತ್ಪಾದಿಸಲು ಮುಂದಾಗಬಹುದು. ಇದು ಮತ್ತಷ್ಟು ಹಾನಿಗೆ ಕಾರಣವಾಗಬಹುದು.

ಹಾಗಾದ್ರೆ ಇದಕ್ಕೆ ಪರಿಹಾರವೇನು?

ತಲೆ ಸ್ನಾನಕ್ಕೆ ಬಿಸಿ ನೀರು ಒಳ್ಳೆಯದಲ್ಲ ಆದ್ರೆ ಬಹಳ ತಂಪಗಿರುವ ನೀರು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಕ್ಕಾಗು ಉಗುರು ಬೆಚ್ಚಗಿನ ನೀರು ಬಳಸುವುದು ಬಹಳ ಉತ್ತಮ. ತಲೆಯ ಮೇಲೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದು ಹಾಗೆ ಎಣ್ಣೆ ಹಚ್ಚಿ ಕೆಲ ಸಮಯ ಬಿಟ್ಟು ಸ್ನಾನ ಮಾಡುವುದು ಕೂಡ ಉತ್ತಮ ಅಭ್ಯಾಸವಾಗಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries