ಡಿಸೆಂಬರ್ ಕಳೆಯಿತು ಎಂದರೆ ಮಕ್ಕಳಲ್ಲಿ ಪರೀಕ್ಷೆಯ ಒತ್ತಡ ಹೆಚ್ಚಾಗುವುದು. ಕೆಲ ಮಕ್ಕಳಂತೂ ತುಂಬಾನೇ ಮಾನಸಿಕ ಒತ್ತಡ ತೆಗೆದುಕೊಳ್ಳುತ್ತಾರೆ. ಸರಿಯಾದ ಆಹಾರ ಸೇವಿಸಲ್ಲ, ಓದುವಾಗ ಸ್ನ್ಯಾಕ್ಸ್ ಅಂದ ಚಿಪ್ಸ್, ಕುರುಕುರೆ ಅಂತ ಸವಿಯುತ್ತಾರೆ. ಆದರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲುವಂತಾಗಲು ಆಹಾರಕ್ರಮದ ಕಡೆ ಕೂಡಗಮನಹರಿಸುವುದು ಅಷ್ಟೇ ಮುಖ್ಯವಾಗಿದೆ ಅಂತಾರೆ ನ್ಯೂಟ್ರಿಷಿಯನಿಸ್ಟ್ ಶಿಶಿರಾ.
ಮಕ್ಕಳು ಓದಿನಲ್ಲಿ ಹಚ್ಚು ಏಕಾಗ್ರತೆ ನೀಡಲು ಬ್ರೇಕ್‌ಫಾಸ್ಟ್ ಕೂಡ ಪ್ರಮುಖ ಪಾತ್ರವಹಿಸುತ್ತದೆ
ಒಳ್ಳೆಯ ನಿದ್ದೆ ಜೊತೆಗೆ ಆರೋಗ್ಯಕರ ಬ್ರೇಕ್‌ಫಾಸ್ಟ್ ತಿನ್ನಲು ಪ್ರೋತ್ಸಾಹ ನೀಡಬೇಕು. ಅವರು ಬೆಳಗ್ಗೆ ಸರಿಯಾಗಿ ತಿನ್ನದೆ ಹೋದಾಗ ಓದಿನ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗಲ್ಲ. ಹಾಗಾಗಿ ಬೆಳಗ್ಗೆ ಮಕ್ಕಳ ಬ್ರೇಕ್‌ಫಾಸ್ಟ್ ಕಡೆಗೆ ಗಮನಹರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಮಕ್ಕಳು ಬೆಳಗ್ಗೆ ಪೋಷಕಾಂಶ ಅಧಿಕವಿರುವ ಆಹಾರ ಸೇವಿಸಬೇಕು.ಅವರು ಬೆಳಗ್ಗೆ ಸೇವಿಸುವ ಆಹಾರದಲ್ಲಿ ಪ್ರೊಟೀನ್ , ಪೋಷಕಾಂಶಗಳು, ವಿಟಮಿನ್‌ಗಳು ಎಲ್ಲವೂ ಇರಬೇಕು.
ಮಕ್ಕಳ ಲಂಚ್‌ಗೆ ಕೂಡ ಆರೋಗ್ಯಕರ ಆಹಾರ ನೀಡಬೇಕು
ಚೀಸ್, ಹಣ್ಣುಗಳು, ತರಕಾರಿ , ಹಾಲಿನ ಉತ್ಪನ್ನಗಳು ಈ ಬಗೆಯ ಆಹಾರ ಅವರ ಲಂಚ್‌ಬಾಕ್ಸ್‌ನಲ್ಲಿ ಹಾಕಿ ಕಳುಹಿಸಬೇಕು. ಮಕ್ಕಳು ಬಾಕ್ಸ್ ವಿಷಯದಲ್ಲಿ ತುಂಬಾನೇ ಕಿರಿಕಿರಿ ಮಾಡುತ್ತವೆ, ಆದರೆ ಆರೋಗ್ಯಕರ ಆಹಾರ ನಿಮ್ಮ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರಿಗೆ ತಿಳಿ ಹೇಳಿದಾಗ ಅವರು ಆರೋಗ್ಯಕರ ಆಹಾರ ಲಂಚ್‌ಬಾಕ್ಸ್‌ಗೆ ತುಂಬಿಸಲು ಒಪ್ಪುತ್ತಾರೆ.
ಶಾಲೆಯಿಂದ ಮರಳಿದ ಮೇಲೆ ಕೂಡ ಆರೋಗ್ಯಕರ ಆಹಾರ ನೀಡಿ
ಮಕ್ಕಳು ಶಾಲೆಯಿಂದ ಮನೆಗೆ ಮರಳಿದಾಗ ತಿನ್ನಲು ಏನಾದರು ಕೊಡುತ್ತಾರೆ, ಆವಾಗ ಮಕ್ಕಳ ಹೊಟ್ಟೆ ತುಂಬುವ ಆಹಾರದ ಬದಲಿಗೆ ಆರೋಗ್ಯಕರ ಆಹಾರದ ಕಡೆಗೆ ಗಮನಹರಿಸಬೇಕು. ಹಣ್ಣೂಗಳು, ತರಕಾರಿ, ಕಾಳುಗಳನ್ನು ಬೇಯಿಸಿ ಕೊಡುವುದು ಮಾಡಬೇಕು.
ಮಕ್ಕಳು ಅವರಿಗೆ ಇಷ್ಟವಾದ ಚಿಪ್ಸ್, ಕೇಕ್ ಎಲ್ಲಾ ತಿನ್ನಬಹುದು, ಆದರೆ ಮಿತಿಯಲ್ಲಿ ತಿನ್ನಬೇಕು.
ಪೋಷಕಾಂಶ ಅಧಿಕವಿರುವ ಆಹಾರ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸಲು ಸಹಕಾರಿ
ಕಬ್ಬಿಣದಂಶ, ಸತು ಈ ಬಗೆಯ ಆಹಾರ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಇನ್ನು ಸಮುದ್ರಾಹಾರ, ಎಳು ಮಾಂಸ, ಧಾನ್ಯಗಳು, ಕೆಂಪಕ್ಕಿ ಅನ್ನ, ವ್ಹೀಟ್ ಬ್ರೆಡ್ ಸ್ಯಾಂಡ್‌ವಿಚ್ ಈ ಬಗೆಯ ಆಹಾರ ನೀಡಿ.
ವಿಟಮಿನ್ ಸಿ ಇರುವ ಆಹಾರ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ, ಪರೀಕ್ಷೆ ಸಮಯದಲ್ಲಿ ಮಕ್ಕಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಬಗೆಯ ಆಹಾರ ಸಹಕಾರಿಯಾಗಿದೆ
ಒಮೆಗಾ 3 ಕೊಬ್ಬಿನಂಶ ನೀಡಿ: ಅಗಸೆ ಬೀಜ, ಸೂಪ್, ಸಿಹಿ ಕುಂಬಳಕಾಯಿ ಬೀಜ, ಮೊಟ್ಟೆ ಈ ಬಗೆಯ ಆಹಾರ ಸೇವಿಸಲು ನೀಡಿ.
ಸಾಕಷ್ಟು ನೀರು ಕುಡಿಯುವುದು ತುಂಬಾನೇ ಮುಖ್ಯ: ಪರೀಕ್ಷೆ ಸಮಯದಲ್ಲಿ ಸಾಕಷ್ಟು ನೀರು ಕುಡೊಯಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಸುಸ್ತು ಉಂಟಾಗುವುದು. ಬರಿ ನೀರು ಕುಡಿಯಲು ಇಷ್ಟಪಡದಿದ್ದರೆ ಒಂದು ಲೋಟ ಫ್ರೆಷ್ ಜ್ಯೂಸ್ ಕೂಡ ಕುಡಿಯಬಹುದು.