ಕೋಝಿಕ್ಕೋಡ್: ಹೈಡ್ರಾಲಿಕ್ ವೈಫಲ್ಯದಿಂದ ಏರ್ ಇಂಡಿಯಾ ವಿಮಾನ ಕರಿಪ್ಪೂರ್ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದುಬೈನಿಂದ ಕೋಝಿಕ್ಕೋಡ್‍ಗೆ ಬಂದಿದ್ದ ಏರ್ ಇಂಡಿಯಾ ವಿಮಾನ IX 344 ತುರ್ತು ಭೂಸ್ಪರ್ಶ ಮಾಡಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈಡ್ರಾಲಿಕ್ ವೈಫಲ್ಯವನ್ನು ಗಮನಿಸಿದಾಗ, ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಲಾಯಿತು. ನಂತರ ತುರ್ತು ಎಚ್ಚರಿಕೆ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು.
ಹಲವಾರು ಆಂಬ್ಯುಲೆನ್ಸ್‍ಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳನ್ನು ರನ್‍ವೇಗೆ ಧಾವಿಸಲಾಯಿತು. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು.