ಮಧೂರು: ಬಂಟರ ಸಂಘದ ಮಧೂರು ಸಮಿತಿಯ ಮಹಿಳಾ ವಿಭಾಗದ ಶ್ರೀ ದುರ್ಗಾ ಮಹಿಳಾ ಬಂಟರ ಭಜನಾ ಮಂಡಳಿಗೆ ರವಿವಾರ ಪರಕ್ಕಿಲದಲ್ಲಿರುವ ಮಧೂರು ಬಂಟರ ಸಂಘದ ಬಯಲು ರಂಗ ಮಂದಿರದಲ್ಲಿ ಚಾಲನೆ ನೀಡಲಾಯಿತು.
ಮಧೂರು ಹಾಗೂ ಮೊಗ್ರಾಲ್ ಪುತ್ತುರು ಪಂಚಾಯಿತಿಯ ಕೂಡ್ಲು, ಗಂಗೆ, ಮಾಯಿಪ್ಪಾಡಿ, ಮಧೂರು, ಸಿರಿಬಾಗಿಲು, ಮುಂತಾದ ಭಾಗದ ಬಂಟ ಮಹಿಳೆಯರು ಒಟ್ಟು ಸೇರಿ ನೂತನ ಭಜನಾ ಸಂಘಕ್ಕೆ ರೂಪ ಕಲ್ಪನೆ ನೀಡಿದರು. ಮಧೂರು ಬಂಟ ಮಹಿಳಾ ಸಮಿತಿಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಗೌರವ ಅಧ್ಯಕ್ಷೆ ಖ್ಯಾತ ನಾಟಿ ವೈದ್ಯೆ ಯಮುನ ಎಸ್ ಶೆಟ್ಟಿ ಮತ್ತು ಕಾರ್ಯಧ್ಯಕ್ಷೆ ಶ್ಯಾಮಲಾ ಎಂ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಭಜನಾ ಮಂಡಳಿಗೆ ಚಾಲನೆ ನೀಡಿದರು. ಶೈಲಜಾ ಪಿ ಶೆಟ್ಟಿ ಮಾಯಿಪಾಡಿ ಸಂಚಾಲಕಿಯಾಗಿರುವ ಸಮಿತಿಯಲ್ಲಿ ಶೋಭಾ ಕೊಲ್ಯ ಮತ್ತು ಸುಜಾತ ಕಜೆ ಸಹ ಸಂಚಾಲಕಿಯರಾಗಿರುವರು. ಸುಜಾತ ಕೊಲ್ಯ, ರಾಜೀವಿ ಕೊಲ್ಯ, ದೇವಕಿ ರೈ ಗಂಗೆ, ರಾಜೀವಿ ಗಂಗೆ, ವಿನೋದ, ಶ್ರೀದೇವಿ ಗಂಗೆ, ಸವಿತಾ ಮಾಯಿಪ್ಪಾಡಿ, ಜಯಲಕ್ಷ್ಮಿ ಕೂಡ್ಲು, ಸುಮನ ಕೂಡ್ಲು, ಯಮುನಾ, ಮಾಲತಿ ಮಣ್ಣಿಪ್ಪಾಡಿ, ಶ್ಯಾಮಲಾ ಹಾಗೂ ಶೋಭಾ ಸದಸ್ಯೆಯರಾಗಿದ್ದಾರೆ.
ರೋಹಿತಾಕ್ಷಿ ಬಿ ರೈ ಅವರ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಮಹಿಳಾ ಸದಸ್ಯೆಯರು ಭಜನೆ ಗೀತೆಗಳನ್ನು ಹಾಡುವ ಮೂಲಕ ಶ್ರೀ ದುರ್ಗಾ ಬಂಟ ಮಹಿಳೆಯರ ಭಜನಾ ಮಂಡಳಿಗೆ ಚಾಲನೆ ನೀಡಿದರು
ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು, ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರ್ ಗುತ್ತು ಕಾರ್ಯದರ್ಶಿ ಗಣೇಶ್ ರೈ ನಾಯಕೋಡು ಪದಾಧಿಕಾರಿಗಳಾದ ಅಶೋಕ್ ರೈ ಸೂರ್ಲು, ಬಾಲಕೃಷ್ಣ ರೈ ಗಂಗೆ, ಸಂತೋಷ್ ರೈ ಗಂಗೆ, ಸತೀಶ್ ಆಳ್ವ ಕುಚ್ಚಿಕ್ಕಾಡ್, ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ, ಬಾಲಕೃಷ್ಣ ಮಧೂರು, ಮುಂತಾದವರು ಉಪಸ್ಥಿತರಿದ್ದರು.