ಕಾಸರಗೋಡು: ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಜ. 11ರಂದು ಸಂಜೆ 4ಕ್ಕೆ ಕೋಟೆಕಣಿ ಶ್ರೀರಾಮನಾಥ ಭವನದಲ್ಲಿ ಜರುಗಲಿದೆ.
ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಸಂಕಬೈಲ್ ಸತೀಶ್ ಅಡಪ ಸಮಾರಂಭ ಉದ್ಘಾಟಿಸುವರು. ಯಕ್ಷಗಾನ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನದ ಗುರುಪ್ರಸಾದ್ ಕೋಟೆಕಣಿ, ಯಕ್ಷಗಾನ ಕಲಾವಿದೆ ಪ್ರಮಿಳಾ ಉಪಸ್ಥಿತರಿರುವರು.