ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಾ. 27ರಿಂದ ಏ. 7ರವರೆಗೆ ನಡೆಯುವ ಬ್ರಹ್ಮಕಲವೋತ್ಸವ ಮತ್ತು ಮೂಡಪ್ಪ ಸೇವೆಯ ಅಂಗವಗಿ ಮಧೂರು ಪಂಚಾಯಿತಿ ಬ್ರಹ್ಮಕಲಕೋತ್ಸವ ಸಮಿತಿಯ ಅಂಗವಾಗಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಉಪ ಸಮಿತಿಯನ್ನು ರಚಿಸಲಾಯಿತು.
ಉದಯಗಿರಿ ಶ್ರೀ ವಿಷ್ಣುಮೂರ್ತಿ ಸನ್ನಿಧಿಯಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ಅವರು, ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಗಳನ್ನು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಿಂದೂ ಮನೆಗಳಿಗೆ ತಲುಪಿಸಿ ಮುಂದೆ ನಡೆಯುವ ಬ್ರಹ್ಮಕಲಶೋತ್ಸವದ ಸಮಯದಲ್ಲಿ ಸ್ವಯಂಸೇವಕರಾಗಿ ಭಾಗವಹಿಸುವಂತೆ ಮನವಿಮಾಡಿದರು. ಕೇಂದ್ರ ಸಮಿತಿಯ ಕಾರ್ಯದರ್ಶಿ ರವೀಂದ್ರ ರೈ ಸಿರಿವಾಗಿಲು ಉಪಸ್ಥಿತರಿದ್ದರು. ಉದಯಗಿರಿ ಶ್ರೀ ವಿಷ್ಣುಮೂರ್ತಿ ಉಪ ಸಮಿತಿಯ ಗೌರವಾಧ್ಯಕ್ಷರಾಗಿ ರಾಮಸ್ವಾಮಿ, ಅಧ್ಯಕ್ಷರಾಗಿ ಪ್ರಭಾಕರ ಪಂಚಮಿ, ಪ್ರಧಾನ ಸಂಚಾಲಕರಾಗಿ ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಭಾಕರ ಪಂಚಮಿ ಕಾರ್ಯಕ್ರಮ ನಿರೂಪಿಸಿ ಸುನಿಲ್ ಕುಮಾರ್ ವಂದಿಸಿದರು.
ಪೆರ್ಲದಲ್ಲಿ ಇಂದು ಸಭೆ:
ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಮನವಿಪತ್ರ ಮತ್ತು ಆಮಂತ್ರಣ ಪತ್ರಿಕೆಯನ್ನು ಎಣ್ಮಕಜೆ ಪಂಚಾಯಿತಿಯ 15ನೇ ವಾರ್ಡ್ ಮತ್ತು 16ನೇ ವಾರ್ಡ್‍ಗಳ ಮನೆಗಳಿಗೆ ತಲುಪಿಸಲು ಸಮಿತಿ ರಚಿಸುವ ಬಗ್ಗೆ ಚರ್ಚಿಸಲ ಜ. 11ರಂದು ಸಂಜೆ 5.30ಕ್ಕೆ ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಶ್ರೀಧರ್ಮಶಾಸ್ತ್ರ ಭವನದಲ್ಲಿ ಸಭೆ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.