ವಾಟ್ಸಾಪ್ ತಮ್ಮ ಬಳಕೆದಾರರಿಗೆ ನಿಜಕ್ಕೂ ಹೆಚ್ಚು ಸಮಯ ಉಳಿಸಲು ಈ ಇಂಟ್ರೆಸ್ಟಿಂಗ್ ಹೊಸ ಫೀಚರ್ ಘೋಷಿಸಿದೆ. ಹೊಸ ಫೀಚರ್ ಬಳಕೆದಾರರಿಗೆ ಅವರ ಹಳೆಯ ಚಾಟ್ ಮೆಸೇಜ್‌ಗಳನ್ನು ನೇರವಾಗಿ ದಿನಾಂಕದ ಆಧಾರದ ಮೇರೆಗೆ ಪ್ರಕಾರ ಚಾಟ್‌ಗಳನ್ನು ಹುಡುಕಲು ಅನುಮತಿಸುತ್ತದೆ. ಇದು ಆಪಲ್, ಆಂಡ್ರಾಯ್ಡ್, ಮ್ಯಾಕ್, ಡೆಸ್ಕ್‌ಟಾಪ್ ಮತ್ತು ವಾಟ್ಸಾಪ್ ವೆಬ್‌ನಂತಹ ಇತರ ಪ್ಲಾಟ್‌ಫಾರ್ಮ್‌ಗಳಲ್ಲೂ ಈ ಹೊಸ ಫೀಚರ್ ಲಭ್ಯವಿದೆ. ಅಂದ್ರೆ ವಾಟ್ಸಾಪ್‌ನ ಹೊಸ ಫೀಚರ್‌ನಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಕ್ಯಾಲೆಂಡರ್ ಫೀಚರ್ ಚಾಟ್‌ಗಳನ್ನು ಹುಡುಕಲು ಅನುಮತಿಸುತ್ತದೆ.
ಆಂಡ್ರಾಯ್ಡ್ ಫೋನ್‌ಗಳಲ್ಲಿ WhatsApp Search by Date ಹೊಸ ಫೀಚರ್!
➥ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನ್ಗಳಲ್ಲಿ WhatsApp ತೆರೆದು ಅಪ್ಡೇಟ್ ಮಾಡಿಕೊಂಡು ತೆರೆಯಿರಿ.
➥ಇದರ ನಂತರ ವಾಟ್ಸಾಪ್‌ನ ಹೊಸ ಫೀಚರ್‌ನಿಂದ ಚುಟಾಕಿಯೊಳಗೆ ನಿಮ್ಮೆಲ್ಲ ಹಳೆ ಮೆಸೇಜ್ ಪಡೆಯಲು ಈ ಫೀಚರ್ ಲಭ್ಯವಾಗಲಿದೆ.
➥ನೀವು ದಿನಾಂಕದ ಆಧಾರದ ಮೇಲೆ ಮೆಸೇಜ್ ಹುಡುಕಲು ಬಯಸುವ ವೈಯಕ್ತಿಕ ಚಾಟ್ ಆಗಿರಬಹುದು ಅಥವಾ ಗ್ರೂಪ್ ಚಾಟ್ ಅನ್ನು ಕ್ಲಿಕ್ ಮಾಡಿ ಪ್ರೊಫೈಲ್ ತೆರೆಯಿರಿ.
➥ಈಗ ಪ್ರೊಫೈಲ್ ಕೆಳಗೆ ನಿಮಗೆ Audio, Video, Add ಮತ್ತು Search ಎಂಬ 4 ಆಯ್ಕೆಗಳನ್ನು ಕಾಣಲು ಸಾಧ್ಯವಿರುತ್ತದೆ
➥ಇದರಲ್ಲಿ ನೀವು Search ಮೇಲೆ ಕ್ಲಿಕ್ ಮಾಡಿ ಈಗ ಸರ್ಚ್ ಬಾರ್ ಕೊನೆಯಲ್ಲಿ ನಿಮಗೆ 📆 ಈ ಚಿಹ್ನೆ ಕಾಣಬಹುದು.
➥ಇದರ ಮೇಲೆ ಕ್ಲಿಕ್ ಮಾಡುವುದರಿಂದ ನಿಮಗೆ ಕ್ಯಾಲೆಂಡರ್ ತೆರೆಯುತ್ತದೆ ಈಗ ನಿಮಗಿಷ್ಟ ಬಂದ ದಿನವನ್ನು ಆಯ್ಕೆ ಮಾಡಿ ಅಂದಿನ ಚಾಟ್ ಪಡೆಯಬಹುದು.
➥ಒಮ್ಮೆ ನೀವು ಚಾಟ್‌ನಲ್ಲಿರುವಾಗ ಚಾಟ್ ವಿವರಗಳ ಆಯ್ಕೆಯನ್ನು ನೋಡಿ. ಇದನ್ನು ಸಾಮಾನ್ಯವಾಗಿ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳು ಅಥವಾ ರೇಖೆಗಳಿಂದ ಪ್ರತಿನಿಧಿಸಲಾಗುತ್ತದೆ. ಮೆನು ತೆರೆಯಲು ಅದರ ಮೇಲೆ ಟ್ಯಾಪ್ ಮಾಡಬಹುದು.
WhatsApp ಈ ಮುಂಬರಲಿರುವ ಫೀಚರ್ಗಳಲ್ಲಿ ಕೆಲಸ ಮಾಡುತ್ತಿದ
ಮೂಲಭೂತವಾಗಿ ನಿರ್ದಿಷ್ಟ ದಿನದಿಂದ ಏನನ್ನಾದರೂ ಹುಡುಕಲು ನಿಮ್ಮ ಎಲ್ಲಾ ಚಾಟ್‌ಗಳ ಮೂಲಕ ಸುತ್ತಾಡುವ ಬದಲು ಈಗ ನೀವು ದಿನಾಂಕದ ಪ್ರಕಾರ ಹುಡುಕಬಹುದು. ಒಂದು ವಾರದ ಹಿಂದೆ WhatsApp ಹೊಸ ಮೆಸೇಜ್ ಫಾರ್ಮ್ಯಾಟಿಂಗ್ ವೈಶಿಷ್ಟ್ಯವನ್ನು ಘೋಷಿಸಿತು. ಬುಲೆಟ್ ಲಿಸ್ಟ್, ಸಂಖ್ಯೆಯ ಪಟ್ಟಿಗಳು, ಬ್ಲಾಕ್ ಕೋಟ್‌ಗಳು ಮತ್ತು ಇನ್‌ಲೈನ್ ಕೋಡ್‌ನಂತಹ ಹೊಸ ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಪರಿಚಯಿಸುತ್ತಿದೆ ಎಂದು ಕಂಪನಿಯು ಘೋಷಿಸಿತು. ಈ ವೈಶಿಷ್ಟ್ಯಗಳು iOS, ಆಂಡ್ರಾಯ್ಡ್, ವೆಬ್ ಮತ್ತು Mac ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರಿಗೆ ಲಭ್ಯವಿದೆ. ಅವುಗಳನ್ನು ಒನ್-ಆನ್-ಒನ್ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಹಾಗೂ ಚಾನೆಲ್‌ಗಳ ಪ್ರಸಾರ ವೈಶಿಷ್ಟ್ಯದಲ್ಲಿ ಬಳಸಬಹುದು.