ನಮ್ಮ ಮೂತ್ರದ ಬಣ್ಣ ನಮ್ಮ ಆರೋಗ್ಯ ಸ್ಥಿತಿ ಬಗ್ಗೆ ತಿಳಿಸುತ್ತದೆ. ಎಷ್ಟೋ ಬಾರಿ ನಮಗೆ ಆರೋಗ್ಯ ಸಮಸ್ಯೆಯಾಗಿದೆ ಎಂದು ರೋಗ ಸ್ಥಿತಿ ಉಲ್ಭಣವಾಗುವವರೆಗೆ ತಿಳಿಯುವುದಿಲ್ಲ, ಆದ್ದರಿಂದ ನಾವು ಮೂತ್ರ ವಿಸರ್ಜನೆ ಮಾಡುವಾಗ ಅದರ ಬಣ್ಣದ ಕಡೆಗೆ ಗಮನಹರಿಸಬೇಕು. ಮೂತ್ರದ ಯಾವ ಬಣ್ಣ ಏನನ್ನು ಸೂಚಿಸುತ್ತದೆ ಎಂದು ನೋಡೋಣ:
ಕೆಂಪು ಅಥವಾ ಪಿಂಕ್ ಬಣ್ಣ
ಮೂತ್ರ ವಿಸರ್ಜನೆ ಮಾಡುವಾಗ ಮೂತ್ರದ ಬಣ್ಣ ಕೆಂಪಗೆ ಅಥವಾ ಪಿಂಕ್ ಬಣ್ಣದಲ್ಲಿದ್ದರೆ ಕಿಡ್ನಿಗೆ ಹಾನಿಯಾಗಿದೆ ಎಂದರ್ಥ, ಇನ್ನು ನೀವು ಮೂತ್ರ ಪಿಂಕ್ ಕಂಡ ತಕ್ಷಣ ಹೆದರಬೇಕಾಗಿಲ್ಲ, ಏಕೆಂದರೆ ಕೆಲವೊಂದು ಆಹಾರ ಸೇವಿಸಿದಾಗ ಕೂಡ ಮೂತ್ರದ ಬಣ್ಣ ಪಿಂಕ್ ಆಗಿರುತ್ತದೆ. ಇನ್ನು ಕೆಲವೊಂದು ಔಷಧಗಳು ಮೂತ್ರದ ಬಣ್ಣ ಬದಲಾಯಿಸಬಹುದು. ಆದ್ದರಿಂದ ಈ ಬಗ್ಗೆ ಕೂಡನೀವು ಗಮನಿಸಬೇಕು. ಮೂತ್ರದ ಬಣ್ಣ ಬದಲಾಯಿಸುವ ಬಣ್ಣದ ಆಹಾರಗಳನ್ನು ನೀವು ಸೇವಿಸಿಲ್ಲ ಆದರೂ ಇತ್ತೀಚಿನ ದಿನಗಳಲ್ಲಿ ಮೂತ್ರದ ಬಣ್ಣ ಬದಲಾಗಿದೆ ಎಂದು ನಿಮಗನಿಸಿದರೆ ನೀವು ಆ ಬಗ್ಗೆ ಗಮನಹರಿಸಿದರೆ ಒಳ್ಳೆಯದು.
ಮೂತ್ರದ ಬಣ್ಣ ಕಂದು ಬಣ್ಣದಲ್ಲಿದ್ದರೆ
ನಿಮ್ಮ ಮೂತ್ರದ ಬಣ್ಣ ಕಂದು ಬಣ್ಣದಲ್ಲಿದ್ದರೆ ನೀರಿನಂಶ ಕಡಿಮೆಯಾಗಿದೆ ಎಂದರ್ಥ ಅಥವಾ ಲಿವರ್, ಕಿಡನಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಇದೆ ಎಂದರ್ಥ. ಆದ್ದರಿಂದ ಮೂತ್ರದ ಬಣ್ಣ ಹಳದಿಯಿದೆ, ಇತ್ತೀಚೆಗೆ ತುಂಬಾ ಸುಸ್ತು ಈ ಬಗೆಯ ಸಮಸ್ಯೆ ಕಂಡು ಬರುತ್ತಿದೆ ಎಂದಾದರೆ ನೀವು ಲಿವರ್ ಆರೋಗ್ಯದ ಕಡೆಗೆ ಗಮನಹರಿಸಿ.
ಮೂತ್ರದ ಬಣ್ಣ ಹಳದಿಯಾಗಿದ್ದರೆ
ಹಳದಿ ಬಣ್ಣ ಸಾಮಾನ್ಯವಾಗಿ ಹಳದಿ ಬಣ್ಣದಲ್ಲಿರುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ರೀತಿ ಹಳದಿ ಬಣ್ಣದಲ್ಲಿರುತ್ತದೆ , ನೀರು ಜಾಸ್ತಿ ಕುಡಿದಾಗ ಮೂತ್ರದ ಬಣ್ಣ ತಿಳಿಯಾಗುವುದು.
ಕಿತ್ತಳೆ ಅಥವಾ ಹಸಿರು ಬಣ್ಣದಲ್ಲಿದ್ದರೆ
ನಿಮ್ಮ ಮೂತ್ರದ ಬಣ್ಣದ ಹಳದಿ ಬಣ್ಣದಲ್ಲಿದ್ದರೆ ನೀವು ಲಿವರ್ ಆರೋಗ್ಯ ಪರೀಕ್ಷೆ ಮಾಡುವುದು ಒಳ್ಳೆಯದು. ಇನ್ನು ಮೂತ್ರ ಹಳದಿ ಬಣ್ಣದಲ್ಲಿದ್ದರೆ ಮೂತ್ರದ ಸೋಂಕು ಉಂಟಾಗಿದೆ ಎಂದರ್ಥ.
ಮೂತ್ರ ತುಂಬಾ ನೊರೆ-ನೊರೆಯಾಗಿ ಇದ್ದರೆ
ಮೂತ್ರದಲ್ಲಿ ಪ್ರೊಟೀನ್ ಹೆಚ್ಚಾಗಿ ಹೊರ ಹೋದರೆ ಮೂತ್ರ ನೊರೆ ನೊರೆಯಾಗಿರುತ್ತದೆ. ನೀವು ಪ್ರತಿಬಾರಿ ಮೂತ್ರ ವಿಸರ್ಜನೆಗೆ ಹೋದಾಗ ಮೂತ್ರ ನೊರೆ ನೊರೆಯಾಗಿದ್ದರೆ ಕಿಡ್ನಿ ಅಥವಾ ಮೂತ್ರಕೋಶದ ಸಮಸ್ಯೆ ಇದೆ ಎಂದರ್ಥ. ಹಾಗಾಗಿ ಈ ರೀತಿ ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ.
ಮೂತ್ರದ ಬಣ್ಣ ಬಿಳಿ- ಬಿಳಿಯಾಗಿದ್ದರೆ
ಮೂತ್ರದ ಬಣ್ಣ ಸ್ವಲ್ಪ ಬಿಳಿ ಬಿಳಿ ಇದ್ದರೆ ಒಂದು ಲೀಟರ್ ನೀರಿಗೆ ಅರ್ಧ ಲೋಟ ನೀರು ಹಾಕಿದಾಗ ಬರುವ ಬಣ್ಣ ಇದೆಯಲ್ಲಾ ಆ ರೀತಿಯ ಬಣ್ಣವಿದ್ದರೆ ಮೂತ್ರನಾಳ, ಮೂತ್ರಕೋಶ, ಮೂತ್ರ ಪಿಂಡದ ಸೋಂಕು ಇರಬಹುದು ಎಂದರ್ಥ. ಇನ್ನು ಮುಟ್ಟಿನ ಸಮಯದಲ್ಲಿಯೂ ಮೂತ್ರದ ಬಣ್ಣ ಈ ರೀತಿ ಇರಬಹುದು.
ಕಪ್ಪು ಬಣ್ಣ
ಮೂತ್ರ ಕಪ್ಪು ಬಣ್ಣದಲ್ಲಿದ್ದರೆ ನಿಮ್ಮ ದೇಹದಲ್ಲಿ ರಾಸಾಯನಿಕ ಸೇರಿಕೊಂಡಿದೆ ಎಂದರ್ಥ, ಈ ರೀತಿ ಕಂಡು ಬಂದರೆ ತಡಮಾಡಬೇಡಿ, ಕೂಡಲೇ ನೀವು ವೈದ್ಯರನ್ನು ಕಾಣಬೇಕು.
ಯಾವುದೇ ಬಣ್ಣವಿಲ್ಲದಿದ್ದರೆ?
ಮೂತ್ರದಲ್ಲಿ ಯಾವುದೇ ಬಣ್ಣವಿಲ್ಲ ಹಾಗಾದರೆ ನಾವು ಆರೋಗ್ಯವಾಗಿದ್ದೇವೆ ಎಂದಲ್ಲ, ಮೂತ್ರದ ಬಣ್ಣ ತಿಳಿಯಾಗಿದ್ದರೆ ಅದು ಮಧುಮೇಹದ ಸೂಚನೆಯಾಗಿದೆ. ಮೂತ್ರದ ಬಣ್ಣ ತಿಳಿಯಾಗಿದೆ, ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗುತ್ತಿದ್ದರೆ ಮಧುಮೇಹದ ಪರೀಕ್ಷೆ ಮಾಡಿಸಿ.
ಹಾಗಾಗಿ ಮೂತ್ರ ವಿಸರ್ಜನೆಗೆ ಹೋಗುವಾಗ ಫ್ಲಶ್ ಮಾಡುವ ಮುನ್ನ ಅದರ ಬಣ್ಣದ ಕಡೆಗೆ ಕೂಡ ಗಮನಹರಿಸಿ.