ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಮಕರಸಂಕ್ರಮಣ ಮಹೋತ್ಸವಕ್ಕೆ ದಿನ ಸಮೀಪಿಸುತ್ತಿದ್ದಂತೆ ಭಕ್ತಾದಿಗಳ ಸಂಖ್ಯೆಯಲ್ಲೂ ಭಾರೀ ಏರಿಕೆ ಉಂಟಾಗಿದೆ. ಈಗಾಗಲೇ ಜ. 15ರ ವರೆಗೂ ವರ್ಚುವಲ್ ಆನ್‍ಲೈನ್ ಬುಕ್ಕಿಂಗ್ ಪೂರ್ತಿಗೊಂಡಿದ್ದು, ದಿನವೊಂದಕ್ಕೆ ಸನ್ನಿದಾನ ತಲುಪುವ ಭಕ್ತಾದಿಗಳ ಸಂಖ್ಯೆ ಲಕ್ಷ ಸಮೀಪಿಸುತ್ತಿದೆ. ಮುಂಧಿನ ದಿನಗಳಲ್ಲಿ ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಶಬರಿಮಲೆಯಲ್ಲಿ ಮಕರಸಂಕ್ರಮಣ ಪೂಜೆ ಜ. 14ರಂದು ರಾತ್ರಿ 8.55ಕ್ಕೆ ನಡೆಯಲಿದೆ. ಇದರ ಪೂರ್ವಭಾವಿಯಾಘಿ ಜ. 12ರಂದು ಸಂಜೆ 5ಕ್ಕೆ ತಂತ್ರಿವರ್ಯ ಕಂಠರರ್ ಬ್ರಹ್ಮದತ್ತನ್ ಅವರ ಪೌರೋಹಿತ್ಯದಲ್ಲಿ ಪ್ರಾಸಾದ ಶುದ್ಧಿ, 13ರಂದು ಬಿಂಬ ಶುದ್ಧಿ ಕ್ರಿಯಾದಿಗಳು ನಡೆಯಲಿದೆ.
ಈ ಬಾರಿಯ ಮಂಡಲ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಮಕರಸಂಕ್ರಮಣ ಮಹೋತ್ಸವಕ್ಕಾಗಿ ಸಿದ್ಧತೆ ಆರಂಭವಾಗಿದೆ ಎಂದು ಶಬರಿಮಲೆ ಮೇಲ್ಶಾಂತಿ ಎಸ್. ಅರುಣಕುಮಾರ ನಂಬೂತಿರಿ ತಿಳಿಸಿದ್ದಾರೆ. ಪಂದಳಂ ಅರಮನೆಯಿಂದ ತರಲಾಗುವ ತಿರುವಾಭರಣಗಳನ್ನು ಪಾರಂಪರಿಕ ಕಾನನ ಹಾದಿ ಮೂಲಕ ಜ. 12ರಿಂದ ಆರಂಭಗೊಳ್ಳುವ ಭವ್ಯ ಘೋಷಯಾತ್ರೆ ಮೂಲಕ ಸನ್ನಿದಾನಕ್ಕೆ ತಂದು ಜ. 14ರಂದು ಸಂಜೆ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನೆರವೇರಿಸಲಾಗುವುದು. ಇದರೊಂದಿಗೆ ಪೆÇನ್ನಂಬಲಮೇಡಿನಲ್ಲಿ ಮಕರಜ್ಯೋತಿ ಬೆಳಗಲಿದ್ದು, ಭಕ್ತರೆಲ್ಲರೂ ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಲಿದ್ದಾರೆ ಎಂದು ಮುಖ್ಯ ಅರ್ಚಕರು ತಿಳಿಸಿದರು.