HEALTH TIPS

ನಿಧಿ ಕೊರತೆ: ಶಾಲೆಯ ಮಧ್ಯಾಹ್ನದ ಊಟ ಮತ್ತು ಪೌಷ್ಟಿಕಾಂಶ ಯೋಜನೆ ಸಂಕಷ್ಟದಲ್ಲಿ

ಕಣ್ಣೂರು: ರಾಜ್ಯದ ಒಂದರಿಂದ ಎಂಟನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ನೀಡಬೇಕಾದ ಮಧ್ಯಾಹ್ನದ ಊಟದ ಯೋಜನೆಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು, ಶಾಲಾ ಊಟದ ಅಡುಗೆ ವೆಚ್ಚ ಹಾಗೂ ಮಕ್ಕಳಿಗೆ ವಿತರಿಸುವ ಹಾಲು ಮತ್ತು ಮೊಟ್ಟೆಯ ಮೊತ್ತ ತಿಂಗಳುಗಟ್ಟಲೆ ಬಾಕಿ ಉಳಿದಿದೆ.

ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್‍ನ ಒಟ್ಟು ಅಡುಗೆ ವೆಚ್ಚಗಳು, ಸಪ್ಟಂಬರ್ ತಿಂಗಳಿಗೆ ಕೇಂದ್ರದ ಶೇಕಡ 60ರಷ್ಟು ಹಣವನ್ನು ಶಾಲೆಗಳು ಪಡೆಯಲು ವಾಕಿಯಿದೆ. ಈ ತಿಂಗಳುಗಳಲ್ಲಿ ಹಾಲು ಮತ್ತು ಮೊಟ್ಟೆಯ ವೆಚ್ಚವನ್ನು ಸಹ ಪಡೆಯಬೇಕು. ಮೊತ್ತವನ್ನು ಅನುಮತಿಸದಿದ್ದರೆ   ಮುಂದಿನ ವಾರದಿಂದ ಶಾಲೆಗೆ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಹಲವರು  ಮುಖ್ಯಗುರುಗಳಿಗೆ ತಿಳಿಸಿದ್ದಾರೆ.

ಹಾಲು ಸೊಸೈಟಿಗಳಿಂದ ಹಾಲು ಎರವಲು ಪಡೆಯುವುದು ಕೂಡ ಶೀಘ್ರದಲ್ಲೇ ನಿಲ್ಲುತ್ತದೆ. 1 ರಿಂದ 5 ನೇ ತರಗತಿಗೆ ದಿನಕ್ಕೆ 6 ರೂ. ಮತ್ತು 6, 7 ಮತ್ತು 8 ನೇ ತರಗತಿಗಳಿಗೆ ಅಡುಗೆ ವೆಚ್ಚಕ್ಕಾಗಿ ದಿನಕ್ಕೆ 8.16 ರೂ.ಭರಿಸಬೇಕೆಂಬುದು ನಿಯಮ.

ಇದಲ್ಲದೇ ರಾಜ್ಯ ಪೌಷ್ಟಿಕಾಂಶ ಯೋಜನೆಯ ಭಾಗವಾಗಿ ಪ್ರತಿ ಲೀಟರ್ ಹಾಲಿಗೆ 52 ರೂ., ಮೊಟ್ಟೆಗೆ 6 ರೂ.ನೀಡಬೇಕು. ಜೂನ್ ತಿಂಗಳಿನಿಂದ ಈ ರೀತಿ ಮೊತ್ತ ಮಂಜೂರಾಗಿಲ್ಲ. ಆದರೆ ಸಂಪೂರ್ಣ ಮೊತ್ತವು ಹಲವು ತಿಂಗಳುಗಳವರೆಗೆ ಬಾಕಿ ಉಳಿದಿದ್ದರಿಂದ ಅವರ ಸಾಲದ ಸಮಸ್ಯೆ ಹೆಚ್ಚಾಯಿತು. ಕೇರಳ ಖಾಸಗಿ ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಂಘ (ಕೆಪಿಪಿಎಚ್‍ಎ) ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಸುನೀಲ್ ಕುಮಾರ್ ಅವರಿಗೆ ಅಧ್ಯಕ್ಷ ಪಿ. ಕೃಷ್ಣ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯ ಶಿಕ್ಷಕರನ್ನು ಮಧ್ಯಾಹ್ನದ ಊಟದ ಕಾರ್ಯಕ್ರಮದಿಂದ ಮುಕ್ತಗೊಳಿಸುವಂತೆ ಕೆಪಿಪಿಎಚ್‍ಎ ಸಲ್ಲಿಸಿರುವ ಮನವಿ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಾಕಿ ಇದೆ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪ್ರಕರಣವನ್ನು ಮುಂದೂಡಲಾಗಿದೆ.

ಅಡುಗೆಯವರ ಕೂಲಿಯನ್ನೂ ನೀಡಿಲ್ಲ. ಅಡುಗೆ ಕಾರ್ಮಿಕರಿಗೆ ವೇತನವನ್ನುನೀಡಿಲ್ಲ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಇವರ ವೇತನ ಇನ್ನೂ ಮಂಜೂರುಗೊಂಡಿಲ್ಲ. ಈಗ ಮುಖ್ಯೋಪಾಧ್ಯಾಯರು ಮುಂಗಡವಾಗಿ ಅವರ ಕೈಯಿಂದಲೇ ಹೂಡಿ ವ್ಯವಸ್ಥೆ ಮುನ್ನಡೆಸುತ್ತಿದ್ದಾರೆ. ನ್ಯಾಯಾಲಯದ ಕಟ್ಟುನಿಟ್ಟಿನ ಮಧ್ಯಪ್ರವೇಶದಿಂದಾಗಿ ಶಾಲೆಗಳಿಗೆ ಆಗಸ್ಟ್‍ವರೆಗೆ ಮಧ್ಯಾಹ್ನದ ಊಟ, ಮೊಟ್ಟೆ ಮತ್ತು ಹಾಲು ವಿತರಣೆಯ ಹಣವನ್ನು ವಿತರಿಸಲಾಗಿತ್ತು.  ರಾಜ್ಯ ಸರ್ಕಾರವು ಬಳಕೆ ಪ್ರಮಾಣ ಪತ್ರ ನೀಡದ ಕಾರಣ ಅಥವಾ ಅಂಕಿ-ಅಂಶಗಳನ್ನು ಸಲ್ಲಿಸದ ಕಾರಣ ಕೇಂದ್ರವು ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿದುಬಂದಿದೆ.

ಕೇಂದ್ರದ ಮಧ್ಯಾಹ್ನದ ಊಟದ ಯೋಜನೆ ಪುದುಚೇರಿ ಸೇರಿದಂತೆ ಇತರ ರಾಜ್ಯಗಳಲ್ಲಿರುವಂತೆ ಇತರ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು ಮತ್ತು ಮುಖ್ಯ ಶಿಕ್ಷಕರಿಗೆ ಮೇಲ್ವಿಚಾರಣಾ ಕರ್ತವ್ಯವನ್ನು ಮಾತ್ರ ನೀಡಬೇಕು ಎಂಬುದು ಕೆಪಿಪಿಎಚ್‍ಎ ಪ್ರಮುಖ ಬೇಡಿಕೆಯಾಗಿದೆ.

ಈ ರೀತಿಯಾಗಿ, ಮುಖ್ಯ ಶಿಕ್ಷಕರು ಮತ್ತು ಯೋಜನಾ ಶಿಕ್ಷಕರು ಶೈಕ್ಷಣಿಕ ವಿಷಯಗಳಿಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಬಹುದು. ಯಾವುದೇ ಹಣಕಾಸಿನ ಹೊಣೆಗಾರಿಕೆ ಇರುವುದಿಲ್ಲ.

ಹಣ ಬಿಡುಗಡೆಗೆ ತುರ್ತು ಕ್ರಮ ಅಗತ್ಯ: ಎನ್ ಟಿಯು:

ರಾಷ್ಟ್ರೀಯ ಶಿಕ್ಷಕರ ಸಂಘದ (ಎನ್ ಟಿಯು) ರಾಜ್ಯಾಧ್ಯಕ್ಷ ಪಿ.ಎಸ್. ಗೋಪಕುಮಾರ್ ನೀಡಿರುವ ಹೇಳಿಕೆಂತೆ ಬೇರೆ ರಾಜ್ಯಗಳಲ್ಲಿರುವಂತೆ ಯೋಜನೆ ಅನುμÁ್ಠನವನ್ನು ಬೇರೆ ಏಜೆನ್ಸಿಗಳಿಗೆ ಹೊರಗುತ್ತಿಗೆ ನೀಡಬೇಕು ಮತ್ತು ಶಿಕ್ಷಕರಿಗೆ ಇದರಿಂದ ವಿನಾಯಿತಿ ನೀಡಬೇಕು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಈ ಯೋಜನೆ ಮುಖ್ಯ ಶಿಕ್ಷಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries