ಚೀನಾದಲ್ಲಿ ಮತ್ತೆ ಕೋವಿಡ್ 19 ಮರುಕಳಿಸಿದೆಯೇ? ಚೀನಾದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದೆಯೇ? ಎಂದು ಕೇಳಿ ಸೋಷಿಯಲ್ ಮೀಡಿಯಾದಲ್ಲಿ ಚೀನಾದ ಆಸ್ಪತ್ರೆಯ ವೀಡಿಯೋಗಳು ವೈರಲ್ ಆಗಿತ್ತಿದೆ. ಚೀನಾದಲ್ಲಿ ಏನಾದರು ಕಾಯಿಲೆ ಬಂದರೆ ಇಡೀ ವಿಶ್ವವೇ ಅಲರ್ಟ್ ಆಗುತ್ತದೆ, ಏಕೆಂದರೆ ಜಗತ್ತಿಗೆ ನರಕ ತೋರಿಸಿದ ಮಹಾಮಾರಿ ಕೊರೊನಾ ಮೊದಲಿ ಕಂಡು ಬಂದಿದ್ದು ಚೀನಾದಲ್ಲಿಯೇ.
ಇದೀಗ ಅಂಥದ್ದೇ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದ್ದು ಚೀನಾದಲ್ಲಿ ಅರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದೆಯೇ? ಕೋವಿಡ್ 19 ಮರುಕಳಿಸಿದೆಯೇ? ಇದರ ಬಗ್ಗೆ ಚೀನಾ ಅಧಿಕೃತ ಮಾಹಿತಿ ನೀಡಿದೆಯೇ ಇದರ ಬಗ್ಗೆ ನೋಡೋಣ:
ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದೆಯೇ?
ಚೀನಾದ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ, ಕೋವಿಡ್ 19 ಮರುಕಳಿಸಿದೆ ಎಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು ಇದರ ಬಗ್ಗೆ ಚೀನಾದ ಆರೋಗ್ಯ ಇಲಾಖೆಯಾಗಲಿ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.
ಚೀನಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರ ಶೇರ್ ಮಾಡಿದ್ದಾರೆ
ಚೀನಾದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದೆ, ಶವಾಗಾರದಲ್ಲಿ ಶವದ ರಾಶಿಯೇ ಇದೆ, ಅನೇಕ ಬಗೆಯ ವೈರಸ್, ಇನ್‌ಫ್ಲುಯೆಂಜಾ, ನ್ಯೂಮೋನಿಯಾ, ಕೋವಿಡ್ 19 ಚೀನಾದಲ್ಲಿ ವೇಗವಾಗಿ ಹರಡುತ್ತದೆ ಎಂದು ಹೇಳಿದೆ.
ಮತ್ತೊಬ್ಬ ಬಳಕೆದಾರರು ಚೀನಾದ ಆಸ್ಪತ್ರೆಗಳಲ್ಲಿ ಫ್ಲೂ ಜ್ವರದಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್‌ಫ್ಲುಯಂಜಾ ಎ, HMPV, ವೈರಸ್ ವೇಗವಾಗಿ ಹರಡುತ್ತಿದೆ ಎಂದು ಬರೆದಿದ್ದಾರೆ.
ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದೆ ಎಂಬುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ, ಚೀನಾದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆಯೇ? ಸಾವಿನ ಸಂಖ್ಯೆ ಹೆಚ್ಚಾಗಿದೆಯೇ? ಇದರ ಬಗ್ಗೆ ಚೀನಾ ಮಾತ್ರ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಪಾರದರ್ಶಕತೆ ಕಾಪಾಡುವಂತೆ ಚೀನಾವನ್ನು ಒತ್ತಾಯಿಸಿದ ವಿಶ್ವ ಆರೋಗ್ಯ ಸಂಸ್ಥೆ
ಚೀನಾ ತನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂಬ ಗುಟ್ಟನ್ನು ಹೊರಗಡೆ ಬಿಟ್ಟುಕೊಡುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಚೀನಾಕ್ಕೆ ನಿರಂತ ಕರೆ ಮಾಡಿ ಡಾಟಾ ಶೇರ್ ಮಾಡುವಂತೆ ಹೇಳಿದೆ, ಆದರೆ ಚೀನಾ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನಾ ಡಾಟಾ ಶೇರ್ ಮಾಡಿದರೆ ಮಾಡಿದರೆ ಮಾತ್ರ ಇತರ ದೇಶಗಳು ಎಚ್ಚೆತ್ತುಕೊಳ್ಳಲು ಸಾಧ್ಯವಾಗುವುದು.
ಕೋವಿಡ್ 19 ಹುಟ್ಟಿಕೊಂಡಿದ್ದೇ ಚೀನಾದಲ್ಲಿ
ಚೀನಾದಲ್ಲಿ ಕೋವಿಡ್ 19 ಬಂದ ಮೇಲೆ ನಂತರ ಆ ಕೋವಿಡ್ 19 ಇಡೀ ಜಗತ್ತಿಗೆ ಹರಡಿತು. ಇದೀಗ ಚೀನಾದಲ್ಲಿ ಮತ್ತೆ ವೈರಸ್ ಸಮಸ್ಯೆ ಕಾಡಿದೆ, ಆದರೆ ಚೀನಾ ಈ ಮಾಹಿತಿಯನ್ನು ಜಗತ್ತಿನಿಂದ ಬಚ್ಚಿಡುವ ಪ್ರಯತ್ನ ಮಾಡುತ್ತಿದೆ. ಚೀನಾದ ಈ ನಡೆ ಜಗತ್ತಿಗೆ ಆಪತ್ತು ತರಬಹುದು. ಚೀನಾ ಇದೀಗ ವೈರಸ್ ಹರಡುತ್ತಿರುವುದನ್ನು ಬಚ್ಚಿಡುವ ಪ್ರಯತ್ನ ಮಾಡುತ್ತಿದೆಯೇ? ಎಂದು ಚೀನಾದ ವರ್ತನೆಯಿಂದ ಸಂಶಯ ಮೂಡುತ್ತಿದೆ.
ವರ್ಷದ ಆರಂಭದಲ್ಲಿಯೇ ಚೀನಾದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿರುವುದರಿಂದ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಚೀನಾ ಇದರ ಬಗ್ಗೆ ನಿಖರ ಡಾಟಾಶೇರ್ ಮಾಡಿದರೆ ಇತರ ರಾಷ್ಟ್ರಗಳು ಎಚ್ಚೆತ್ತುಕೊಂಡು ಎಚ್ಚರಿಕೆವಹಿಸಬಹುದು.