ಕಾಸರಗೋಡು: ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್(19) ಹಾಗೂ ಶರತ್ ಲಾಲ್(25)ಕೊಲೆ ಪ್ರಕರಣದ 14ಮಂದಿಯ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಇವರ ಶಿಕ್ಷೆ ಪ್ರಮಾಣ ಜ. 3ರಂದು ನ್ಯಾಯಾಲಯದಲ್ಲಿ ಘೊಷಣೆಯಾಗಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಶಾಂತಿ ಸಭೆ ನಡೆಯಿತು.
ಜಿಲ್ಲಾ ಪೆÇಲೀಸ್ ವರಿಷ್ಠೆ ಡಿ.ಶಿಲ್ಪಾ, ಎಡಿಎಂ ಪಿ.ಅಖಿಲ್, ಡಿವೈಎಸ್ಪಿಗಳಾದ ಎಂ.ಸುನಿಲ್ ಕುಮಾರ್, ವಿ.ವಿನೋಜ್, ವಿವಿದ ರಾಜಕೀಯ ಪ್ರತಿನಿಧಿಗಳು ಭಾಗವಹಿಸಿದರು. ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ದಿನದಂದು ಸಾಮಾಜಿಲ ಜಾಲತಾಣಗಳ ಮೇಲೆ ನಿಗಾ ಇರಿಸಲು ಹಾಗೂ ಜಿಲ್ಲೆಯಲ್ಲಿ ಶಾಂತಿಗೆ ಭಂಗ ತಂದೊಡ್ಡಲೆತ್ನಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ದರಿಸಲಾಯಿತು.
ಉದುಮದ ಮಾಜಿ ಶಾಸಕ, ಸಿಪಿಎಂ ಸೆಕ್ರೆಟೇರಿಯೆಟ್ ಸದಸ್ಯ ಕೆ.ವಿ ಕುಞÂರಾಮನ್, ಪ್ರಕರಣದ ಒಂದನೇ ಆರೋಪಿ ಪೀತಾಂಬರನ್, ಎ. ಮಣಿಕಂಠನ್ ಸೇರಿದಂತೆ 14ಮಂದಿ ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಗುರುತಿಸಿತ್ತು.