ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಸಹೋದರಿ ಪತಿಯನ್ನು ಪೊಲೀಸರು ಬಂಧಿಸಿದ್ದು, ಈತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.
ವೆಳ್ಳರಿಕುಂಡು ಪೊಲೀಸ್ ಠಾಣೆ ವಯಾಪ್ತಿಯಲ್ಲಿ ಘಟನೆ. ಇತ್ತೀಚೆಗೆ ಬಾಲಕಿಗೆ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಪಾಸಣೆಗೆ ಕರೆದೊಯ್ದಾಗ ಗರ್ಭಿಣಿಯಾಗಿರುವ ಮಾಹಿತಿ ಬಹಿರಂಗಗೊಂಡಿತ್ತು. ಬಾಲಕಿಯನ್ನು ಚಿಕಿತ್ಸೆಗಾಗಿ ದಾಖಲಿಸಿದ ತಕ್ಷಣ ಹೆರಿಗೆಯಾಗಿತ್ತು. ಬಾಲಕಿಗೆ ಹದಿನೆಂಟು ವರ್ಷ ಪ್ರಾಯವಾಗಿರುವ ಬಗ್ಗೆ ಮನೆಯವರು ವೈದ್ಯರಲ್ಲಿ ತಿಳಿಸಿದ್ದರೂ, 17ರ ಹರೆಯದಲ್ಲೇ ಬಾಲಕಿ ಕಿರುಕುಳಕ್ಕೆ ಒಳಗಾಗಿದ್ದಳು. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ತನ್ನ ಅಕ್ಕನ ಗಂಡ ಕಿರುಕುಳ ನೀಡಿರುವುದಗಿ ತಿಳಿಸಿದ್ದಳು. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ವೆಳ್ಳರಿಕುಂಡು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.