ಕೊಚ್ಚಿ: ಕಾಲೂರು ಸ್ಟೇಡಿಯಂನಲ್ಲಿ ಗಿನ್ನಿಸ್ ವಿಶ್ವ ದಾಖಲೆಯ ನೃತ್ಯ ಕಾರ್ಯಕ್ರಮದ ವೇಳೆ ವಿಐಪಿ ಗ್ಯಾಲರಿಯಿಂದ ಬಿದ್ದು ಗಾಯಗೊಂಡ ಶಾಸಕಿ ಉಮಾ ಥಾಮಸ್ ಅವರು ಪಾಲ್ಗೊಂಡ ಕಾರ್ಯಕ್ರಮ ಆಯೋಜಿಸಿದ್ದ ಮೃದಂಗವಿಷನ್ ಎಂಡಿ ನಿಘೋಷ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೋಲೀಸರು ಆತನನ್ನು ಬಂಧಿಸಿದ್ದಾರೆ.ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ನಿಘೋಷ್ ಕುಮಾರ್ ಪಾಲಾರಿವಟ್ಟಂ ಪೋಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಹೈಕೋರ್ಟ್ ಸೂಚನೆಯಂತೆ ಶರಣಾದನು.
ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ. ಸದ್ಯ ಕಾರ್ಯಕ್ರಮಕ್ಕೆ ಸಿದ್ದಪಡಿಸಿದ ವೇದಿಕೆಯನ್ನು ಅವೈಜ್ಞಾನಿಕವಾಗಿ ಮಾಡಿ ಅವಘಡ ಸೃಷ್ಟಿಸಿದ್ದಕ್ಕಾಗಿ ಬಂಧಿಸಲಾಗಿದೆ. ಹಣಕಾಸು ವಂಚನೆ ಪ್ರಕರಣ ಸೇರಿದಂತೆ ವಿವರವಾದ ತನಿಖೆಯ ನಂತರ ಹೆಚ್ಚಿನ ಆರೋಪಗಳನ್ನು ವಿಧಿಸಲಾಗುತ್ತದೆ.
ಏತನ್ಮಧ್ಯೆ, ಕಾರ್ಯಕ್ರಮವನ್ನು ಆಯೋಜಿಸುವ ಜವಾಬ್ದಾರಿ ನೀಡಲಾದ ಆಸ್ಕರ್ ಇವೆಂಟ್ಸ್ ಮಾಲೀಕರು ಪೋಲೀಸರ ಮುಂದೆ ಇನ್ನೂ ಹಾಜರಾಗಿಲ್ಲ. ಇದಕ್ಕೆ ಆರೋಗ್ಯ ಸಮಸ್ಯೆ ಕಾರಣ ಎಂದು ತಿಳಿದುಬಂದಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.