ಬದಿಯಡ್ಕ: ಕುಂಟಿಕಾನ ಮಠದಲ್ಲಿ ಮಂಡಲ ಪೂಜಾ ಮಹೋತ್ಸವದ ಅಂಗವಾಗಿ ಶ್ರೀರಾಮ ದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೆಳದಲ್ಲಿ ಭಾಗವತರಾಗಿ ಶಿವಶಂಕರ ಭಟ್ ತಲ್ಪಣಾಜೆ, ವೆಂಕಟ್ರಾಜ ಕೆ.ಎಂ., ಹಾಗೂ ಡಾ. ವಿದ್ಯಾ ಆನಂದ್, ಚೆಂಡೆ ಮದ್ದಳೆಯಲ್ಲಿ ಗೋಪಾಲಕೃಷ್ಣ ನಾವುಡ ಮಧೂರು, ಕೃಷ್ಣ ಚೈತನ್ಯ ಚೇರಾಲು, ಪಾತ್ರವರ್ಗದಲ್ಲಿ ಅರ್ಜುನನಾಗಿ ಆನಂದ ಭಟ್ ಕೆಕ್ಕಾರು, ಹನುಮಂತನಾಗಿ ವಸಂತ ಮಾಸ್ತರ್ ಬಾಯಾರು, ವೃದ್ಧ ಬ್ರಾಹ್ಮಣ ಹಾಗೂ ರಾಮನಾಗಿ ಕುಮಾರಿ ಅಭಿಜ್ಞಾ ಬೊಳುಂಬು ಉತ್ತಮ ನಿರ್ವಹಣೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.