HEALTH TIPS

ಮಗಳ ಶಿಕ್ಷಣಕ್ಕೆ ತಂದೆ-ತಾಯಿ ಹಣ ಕೊಡಬೇಕು: ಸುಪ್ರೀಂ ಕೋರ್ಟ್‌

 ನವದೆಹಲಿ: ಶಿಕ್ಷಣಕ್ಕೆ ಅಗತ್ಯವಿರುವ ವೆಚ್ಚವನ್ನು ತನ್ನ ತಂದೆ-ತಾಯಿಯಿಂದ ಪಡೆದುಕೊಳ್ಳುವ, ಕಾನೂನಿನ ಮೂಲಕ ಜಾರಿಗೆ ತರಬಹುದಾದ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ಹಣವನ್ನು ತಮ್ಮ ಮಿತಿಯೊಳಗೆ ನೀಡುವಂತೆ ತಂದೆ-ತಾಯಿಗೆ ಆದೇಶಿಸಬಹುದು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಈ ಮಾತನ್ನು ವೈವಾಹಿಕ ವ್ಯಾಜ್ಯವೊಂದರ ವಿಚಾರಣೆ ಸಂದರ್ಭದಲ್ಲಿ ಹೇಳಿದೆ. ಪರಸ್ಪರ ಬೇರೆಯಾಗಿರುವ ದಂಪತಿಯ ಪುತ್ರಿಯು ಐರ್ಲೆಂಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತಾಯಿಗೆ ನೀಡುತ್ತಿರುವ ಒಟ್ಟು ಜೀವನಾಂಶದ ಭಾಗವಾಗಿ ತಂದೆಯು ಶಿಕ್ಷಣದ ಖರ್ಚುಗಳಿಗೆ ತನಗೆ ₹43 ಲಕ್ಷ ನೀಡಿದ್ದನ್ನು ಪಡೆಯಲು ಪುತ್ರಿ ಒಪ್ಪಿರಲಿಲ್ಲ.

'ಮಗಳಾಗಿ ಈಕೆಗೆ ಶಿಕ್ಷಣದ ವೆಚ್ಚಗಳನ್ನು ತಂದೆ-ತಾಯಿಯಿಂದ ಪಡೆದುಕೊಳ್ಳುವ ಕಾನೂನುಬದ್ಧವಾದ ಹಕ್ಕು ಇದೆ. ಮಗಳಿಗೆ ಶಿಕ್ಷಣವನ್ನು ಪಡೆಯುವ ಮೂಲಭೂತ ಹಕ್ಕು ಇದೆ. ಇದಕ್ಕಾಗಿ, ಅಗತ್ಯವಿರುವ ಹಣವನ್ನು ತಮ್ಮ ಹಣಕಾಸಿನ ಮಿತಿಯೊಳಗೆ ನೀಡುವಂತೆ ತಂದೆ-ತಾಯಿಗೆ ತಾಕೀತು ಮಾಡಬಹುದು' ಎಂದು ಪೀಠವು ಜನವರಿ 2ರಂದು ನೀಡಿರುವ ಆದೇಶದಲ್ಲಿ ಹೇಳಿದೆ.

ಈ ದಂಪತಿಯ ಪುತ್ರಿಯು ತನ್ನ ಘನತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಹಣವನ್ನು ಪಡೆಯಲು ನಿರಾಕರಿಸಿದ್ದಳು. ಆದರೆ ಹಣ ವಾಪಸ್ ಪಡೆಯಲು ತಂದೆ ಒಪ್ಪಿರಲಿಲ್ಲ. ಹಣವನ್ನು ಪಡೆಯುವ ಕಾನೂನುಬದ್ಧ ಹಕ್ಕು ಮಗಳಿಗೆ ಇದೆ ಎಂದು ಪೀಠವು ಸ್ಪಷ್ಟಪಡಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries