ಕಾಸರಗೋಡು: ನಗರದ ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದ ಧನುಪೂಜಾ ಮಹೋತ್ಸವದಂಗವಾಗಿ ನಡೆದ ಸರ್ವೈಶ್ವರ್ಯ ಪೂಜೆಯಂದು ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳರನ್ನು ಗೌರವಿಸಲಾಯಿತು.
É್ಷೀತ್ರ ನಿರ್ಮಾಣ ಕಾರ್ಯ, ಬ್ರಹ್ಮಕಲಶೋತ್ಸವ ಸೇರಿದಂತೆ ನಾನಾ ವಿಧದ ಸೇವೆಗಳನ್ನು ಪರಿಗಣಿಸಿ ವೆಂಕಟ್ರಮಣ ಹೊಳ್ಳ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇವರ ಸಾಮಾಜಿಕ-ಧಾರ್ಮಿಕ ಚಟುವಟಿಕೆ ಗುರುತಿಸಿ ಇತ್ತೀಚೆಗೆ ತಮಿಳ್ನಾಡಿನಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು. ದೇವಸ್ಥಾನದ ಕ್ಷೇತ್ರ ತಂತ್ರಿವರ್ಯ ಬ್ರಹಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ದಿವ್ಯ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ಸುಭಾಷ್ ಪಾಟಾಳಿ, ಧನುಪೂಜಾ ಸಮಿತಿ ಅಧ್ಯಕ್ಷ ವಕೀಲ ಸದಾನಂದ ರೈ, ನಿಶಾಂತ್ ಮೊದಲಾದವರು ಉಪಸ್ಥಿತರಿದ್ದರು.