ಮಂಜೇಶ್ವರ: ಭಾರತ ಕಿಸಾನ್ ಸಂಘದ ಕೇರಳ ಕೃಷಿ ರಥಯಾತ್ರೆ ಸ್ವಾಗತ ಸಮಿತಿ ಸಭೆ ಕೊಂಡೆವೂರು ಶ್ರೀಯೋಗಾನಂದ ಆಶ್ರಮದಲ್ಲಿ ಇತ್ತೀಚೆಗೆ ನಡೆಯಿತು.
ಅಶೋಕ್ ಕುಮಾರ್ ಹೊಳ್ಳ ಸಭೆ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ್ ಶೆಟ್ಟಿ ಅವರು ಕರ್ಷಕ ರಥ ಯಾತ್ರೆಯ ಬಗ್ಗೆ ಸಲಹೆ ನೀಡಿದರು. ರಾಜ್ಯ ಕಾರ್ಯದರ್ಶಿ ರತೀಶ್ ಗೋಪಾಲ್ ರಥಯಾತ್ರೆಯ ಬಗ್ಗೆ ಮಾಹಿತಿ ನೀಡಿದರು ಕ್ಯಾಂಪ್ಕೋ ನಿರ್ದೇಶಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉಪಸ್ಥಿತರಿದ್ದರು.
ರಥಯಾತ್ರೆಯ ಜಿಲ್ಲಾ ಸಂಯೋಜಕರಾಗಿ ವಿನೋದ್ ಬಾಯಾರ್ ಅವರನ್ನು ನೇಮಿಸಲಾಯಿತು. ಏಪ್ರಿಲ್ 2 ರಿಂದ ಮಂಜೇಶ್ವರದಿಂದ ಆರಂಭಿಸುವ ರಥಯಾತ್ರೆ ಏಪ್ರಿಲ್ 28 ರಂದು ತಿರುವನಂತಪುರದಲ್ಲಿ ಸಮಾಪನಗೊಳ್ಳಲಿರುವುದು. ಸಭೆಯಲ್ಲಿ ವಿವಿಧ ಸಮಿತಿಗಳನ್ನು ರೂಪಿಕರಿಸಲಾಯಿತು.
ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪದ್ಮನಾಭ ಕೋಟೆಕಾರ್ ಸ್ವಾಗತಿಸಿ, ಜಗನ್ನಾಥ್ ಮಾಸ್ತರ್ ವಂದಿಸಿದರು.