ಕಾಸರಗೋಡು: ಜಿಲ್ಲಾ ಎಂಪೆÇ್ಲೀಯ್‍ಮೆಂಟ್ ಎಕ್ಸ್‍ಚೇಂಜ್ ಆಶ್ರಯದಲ್ಲಿ ಜನವರಿ 4ರಂದು ಪೆರಿಯ ಎಸ್.ಎನ್.ಕಾಲೇಜಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ 50 ಕಂಪನಿಗಳಿಂದ 1000 ಕ್ಕೂ ಹೆಚ್ಚು ಹುದ್ದೆಗಳ ಕುರಿತು ವರದಿ ಮಾಡಲಾಗಿದೆ.
ಬ್ಯಾಂಕಿಂಗ್, ಹೋಸ್ಪಿಟಾಲಿಟಿ, ಆರೋಗ್ಯ, ವಿಮೆ, ಆಟೋಮೊಬೈಲ್, ಎಂಜಿನಿಯರಿಂಗ್ ಮತ್ತು ಶಿಕ್ಷಣದಂತಹ ವಿವಿಧ ವಲಯಗಳ ಕಂಪನಿಗಳು ಭಾಗವಹಿಸಲಿದೆ. ಬೋಬಿ ಚೆಮ್ಮನ್ನೂರ್ ಜ್ಯುವೆಲರ್ಸ್, ಯುನೈಟೆಡ್ ಮೆಡಿಕಲ್ ಸೆಂಟರ್, ಜಿ.ಟೆಕ್, ವೀರ್ ಮಹೀಂದ್ರಾ, ಸುಲ್ತಾನ್ ಡೈಮಂಡ್ಸ್ ಮತ್ತು ಸಿಗ್ನೇಚರ್ ಆಟೋಮೊಬೈಲ್ಸ್ ಮೊದಲಾದ ಪ್ರಮುಖ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದೆ. ಬೆಳಗ್ಗೆ 10ಕ್ಕೆ ಉದುಮ ಶಾಸಕ ಸಿ.ಎಚ್.ಕುಂಜಂಬು ಉದ್ಯೋಗ ಮೇಳ ಉದ್ಘಾಟಿಸುವರು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ನೋಂದಣಿ ಬೆಳಗ್ಗೆ 9.30ರಿಂದ ಆರಂಭಿಸಲಾಗುವುದು. ಉದ್ಯೋಗ ಮೇಳವು ನಡೆಯುವ ದಿನದಂದು ಎಸ್ ಎನ್ ಕಾಲೇಜು ಇರುವ ಚಾಳಿಂಗಲ್‍ನಲ್ಲಿ ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಗೆ ತಾತ್ಕಾಲಿಕ ನಿಲುಗಡೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.