ನ್ಯೂಯಾರ್ಕ್: ಲಾಸ್ ಏಂಜಲೀಸ್ ನಗರದ ಪೆಸಿಫಿಕ್ ಪ್ಯಾಲಿಸೈಡ್ಸ್ ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶದಲ್ಲಿ ಹಬ್ಬಿರುವ ಕಾಳ್ಗಿಚ್ಚಿನ ಬೆಂಕಿಯಲ್ಲಿ ಐವರು ಸಜೀವ ದಹನವಾಗಿದ್ದಾರೆ.
ಬೆಂಕಿ ನಂದಿಸಲು ಸ್ಥಳೀಯ ಅಗ್ನಿಶಾಮಕ ದಳದೊಂದಿಗೆ ಪುರಸಭೆಯೂ ಕೈಜೋಡಿಸಿದೆ.
ನಗರಗಳಲ್ಲಿರುವ ನೀರಿನ ಟ್ಯಾಂಕ್‌ಗಳು ಸ್ಥಳೀಯವಾಗಿ ಸಂಭವಿಸುವ ಸಣ್ಣಪುಟ್ಟ ಅಗ್ನಿ ಅವಘಡಗಳನ್ನು ನಿಯಂತ್ರಣ ಮಾಡಬಲ್ಲವೇ ಹೊರತು ಅನಿಯಂತ್ರಿತವಾಗಿ ಹರಡುವ ಕಾಳ್ಗಿಚ್ಚುಗಳನ್ನಲ್ಲ ಎಂದು ಅಧಿಕಾರಿಗಳು ಅಸಹಾಯಕರಾಗಿ ಹೇಳಿದ್ದಾರೆ.