ಭೋಪಾಲ್: ಧಾರ್ಮಿಕ ಭಯೋತ್ಪಾದನೆ ಅಪಾಯಕಾರಿ ಮತ್ತು ದುರಂತ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಐಎಸ್ ಭಯೋತ್ಪಾದಕ ಮುಹಮ್ಮದ್ ಶಾಹಿದ್ ಖಾನ್ ನ ಜಾಮೀನು ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯವು ಈ ಹೇಳಿಕೆಗಳನ್ನು ನೀಡಿದೆ.
ಶಾಹಿದ್ ಖಾನ್ ಒಬ್ಬ ಭಯೋತ್ಪಾದಕ, ಜಬಲ್ಪುರದ ಶಸ್ತ್ರಾಸ್ತ್ರ ಕಾರ್ಖಾನೆಯ ಮೇಲೆ ದಾಳಿ ಮಾಡಿ ದೇಶದಲ್ಲಿ ಇಸ್ಲಾಮಿಕ್ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸಿದ.ಇದರಿಂದ ನ್ಯಾಯಾಲಯವು ಅವನಿಗೆ ಜಾಮೀನು ನಿರಾಕರಿಸಿತು.
"ಧಾರ್ಮಿಕ ಭಯೋತ್ಪಾದನೆಯು ಅಪಾಯಕಾರಿ ಸಿದ್ಧಾಂತವಾಗಿದ್ದು ಅದು ಧರ್ಮದ ನಿಜವಾದ ತತ್ವಗಳನ್ನು ವಿರೂಪಗೊಳಿಸುತ್ತದೆ ಮತ್ತು ಜನರು ಮತ್ತು ಸಮಾಜಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಧಾರ್ಮಿಕ ಭಯೋತ್ಪಾದನೆಯ ಬೇರುಗಳು ಆಳವಾಗಿದೆ ಮತ್ತು ಸಂಕೀರ್ಣವಾಗಿವೆ, ಆದರೆ ಯಾವುದೇ ಧರ್ಮವು ಹಿಂಸೆ ಅಥವಾ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾವು ತೋರಿಸಲು ಸಾಧ್ಯವಿಲ್ಲ ... ಗಂಭೀರ ಭಯೋತ್ಪಾದನಾ ಆರೋಪ ಹೊರಿಸಲ್ಪಟ್ಟ ಯಾರಿಗಾದರೂ ಯಾವುದೇ ದಯೆ ನೀಡಲಾಗದು " ಎಂದು ಹೈಕೋರ್ಟ್ ಹೇಳಿದೆ.
ಎನ್.ಐ.ಎ. 2023 ಮೇ ಯಲ್ಲಿ ಶಾಹಿದ್ ಖಾನ್ ನನ್ನು ಬಂಧಿಸಿತ್ತು. ಇಬ್ಬರು ಭಯೋತ್ಪಾದಕರಾದ ಆದಿಲ್ ಖಾನ್ ಮತ್ತು ಸೈಯದ್ ಮಾಮೂರ್ ಅಲಿ ಅವರನ್ನು ಸಹ ಬಂಧಿಸಿತ್ತು. ನಂತರ, 2020 ರ ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಇವರೆಲ್ಲರೂ ಝಾಕಿರ್ ನಾಯಕ್ ನನ್ನು ಭೇಟಿ ಮಾಡಿದ್ದರು ಎಂದು ಎನ್.ಐ.ಎ. ತನಿಖೆಯಲ್ಲಿ ಕಂಡುಬಂದಿತ್ತು.