ನವದೆಹಲಿ: ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ಹರಡುವುದು ವ್ಯಾಪಕವಾಗುತ್ತಿದೆ ಎನ್ನುವ ವರದಿಗಳು ವ್ಯಾಪಕವಾಗುತ್ತಿರುವ ಕಾರಣಕ್ಕೆ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಶನಿವಾರ ತಿಳಿಸಿದೆ.
ಪರಿಸ್ಥಿತಿಯ ಕುರಿತು ಆಗಾಗ ಮಾಹಿತಿ ಒದಗಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಕೇಳಿಕೊಂಡಿರುವುದಾಗಿ ಹೇಳಿದೆ.
ಆರೋಗ್ಯ ಸೇವೆಗಳ ಮಹಾ ನಿರ್ದೇಶಕರ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿದ ನಂತರ ಐಸಿಎಂಆರ್ ಈ ರೀತಿ ತಿಳಿಸಿದೆ.
ಚೀನಾದಲ್ಲಿ ಎಚ್‌ಎಂಪಿವಿ ವ್ಯಾಪಕವಾಗಿ ಹರಡುತ್ತಿವೆ ಎಂಬ ವರದಿಗಳಿವೆ. ಇದು ಹೊಸ ವೈರಸ್ ಏನೂ ಅಲ್ಲ. ಭಾರತ ಸೇರಿ ಹಲವು ದೇಶಗಳಲ್ಲಿ ಈ ಹಿಂದೆಯೇ ಜನರಲ್ಲಿ ಕಾಣಿಸಿಕೊಂಡಿರುವ ವೈರಸ್ ಇದು. ಆದಾಗ್ಯೂ, ವೈದ್ಯಕೀಯ ಚಿಕಿತ್ಸೆಗೆ ಸಜ್ಜಾಗಲಾಗುತ್ತದೆ ಎಂದೂ ಹೇಳಿದೆ.