ಪೆರ್ಲ: ಕಟ್ಟಡ ನಿರ್ಮಾಣ ಕಾಯಕದ ನಡುವೆ ಎರಡು ಅಂತಸ್ತಿನ ಮೇಲಿನಿಂದ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡ ಪೆರ್ಲ ವಲಯ ವೈಶಾಲಿ ನವಜೀವನ ಸಮಿತಿಯ ಸದಸ್ಯ ದೇವಣ್ಣ ನಾಯ್ಕ ಸಂಟನಡ್ಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನವಜೀವನ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ವಲಯ ಸಮಿತಿಗಳ ಸಹಕಾರದೊಂದಿಗೆ 37050 ರೂ. ಧನ ಸಹಾಯ ಸಂಗ್ರಹಿಸಿ ದೇವಣ್ಣ ನಾಯ್ಕರ ಮನೆಯವರಿಗೆ ಹಸ್ತಾಂತರಿಸಿ ಮಾನವೀಯತೆಗೆ ಮಾದರಿಯಾದರು.
ಈ ಸಂದರ್ಭದಲ್ಲಿ ನವಜೀವನ ಸಮಿತಿಯ ವಿವಿಧ ಪದಾಧಿಕಾರಿಗಳು, ಧ.ಗ್ರಾ.ಯೋಜನೆಯ ಪೆರ್ಲ ವಲಯ ಮೇಲ್ವಿಚಾರಕಿ ಜಯಶ್ರೀ, ಸೇವಾ ಪ್ರತಿನಿಧಿ ರೇಖಾಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.