ಬದಿಯಡ್ಕ: ರಿ ಕನೆಕ್ಟಿಂಗ್ ಯೂತ್ ಘೋಷಣೆಯಡಿ ಜಿಲ್ಲಾ ಮಟ್ಟದ ಮಾದಕ ದ್ರವ್ಯ ವಿರೋಧಿ ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ನೆಲ್ಲಿಕಟ್ಟೆ ಪಿಬಿಎಂ ಇಂಗ್ಲಿಷ್ ಮಾಧ್ಯಮ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೆಲ್ಲಿಕ್ಕಟ್ಟೆಯಲ್ಲಿ ನಡೆಸಲಾಯಿತು. ಪ್ರಧಾನ ಜಿಲ್ಲಾ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಾನು ಎಸ್. ಪಣಿಕ್ಕರ್ ದೂರು ಪೆಟ್ಟಿಗೆ ಸ್ಥಾಪನೆಯನ್ನು ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಇಬ್ರಾಹಿಂ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ವಿಭಾಗೀಯ ಸಿವಿಲ್ ನ್ಯಾಯಾಧೀಶೆ ರುಕ್ಮಾ ಎಸ್ ರಾಜ್ ಮತ್ತು ಡಿವೈಎಸ್ಪಿ ಸಿ ಸುನೀಲ್ ಕುಮಾರ್ ಮಾತನಾಡಿದರು.
ಪಿಬಿಎಂ ಜಿಎಚ್‍ಎಸ್‍ಎಸ್ ಪ್ರಾಂಶುಪಾಲ ನಿಜಾಮ್ ಬೋವಿಕ್ಕಾನ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಿಭಾಗಾಧಿಕಾರಿ ಸ್ವಾಗತಿಸಿ, ಎ.ಪಿ. ಕೇಶವನ್ ವಂದಿಸಿದರು.