ಉಪ್ಪಳ: ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬಾಯಾರು ಶಾಖೆಯ ಸದಸ್ಯರಾದ ಗಣಪತಿ ಭಟ್ ಕುರುವೇರಿ ಇವರ ಹೃದಯ ಶಸ್ತ್ರಚಿಕಿತ್ಸೆಗೆ ಮಂಜೂರಾದ ಸಹಾಯಧನದ ಮೊತ್ತ ರೂ.50,000/- (ರೂಪಾಯಿ ಐವತ್ತು ಸಾವಿರ)ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಹಸ್ತಾಂತರಿಸಿದರು.
ಕ್ಯಾಂಪ್ಕೋ ನಿರ್ದೇಶಕ ಬಾಲಕೃಷ್ಣ ರೈ ಬಾನೊಟ್ಟು, ಕ್ಯಾಂಪ್ಕೋ ಬದಿಯಡ್ಕ ಪ್ರಾಂತೀಯ ಪ್ರಬಂಧಕ ಚಂದ್ರ ಯಂ, ಬಾಯಾರು ಶಾಖೆಯ ಪ್ರಬಂಧಕ ರಮೇಶ್, ವಿಶ್ವಕೇಶವ ಕುರುವೇರಿ ಜೊತೆಗಿದ್ದರು.