ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕಾಗಿ ಮಾನ್ಯದ ಮಂಜುಶ್ರೀ ಯುವಕ ವೃಂದದ ಸದಸ್ಯರು ಸಾವಯವ ತರಕಾರಿ ಬೆಳೆಸುವ ಉದ್ದೇಶದೊಂದಿಗೆ ತರಕಾರಿ ಬೀಜವನ್ನು ಬಿತ್ತುವುದರ ಮೂಲಕ ನಾಡಿನ ಗಮನಸೆಳೆದಿದ್ದಾರೆ.
ವಿಷಮುಕ್ತ ತರಕಾರಿ ಬೆಳೆಗಳು ಸಹಸ್ರಾರು ಮಂದಿ ಭಗವದ್ಭಕ್ತರಿಗೆ ನೀಡುವ ಭೋಜನ ಪ್ರಸಾದಕ್ಕೆ ಉಪಯೋಗವಾಗಲಿದೆ. ಮಾರ್ಚ್ 1ರಿಂದ 09ರ ತನಕ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಜರಗಲಿವೆ. ಶ್ರೀಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಇದೀಗ ಅಂತಿಮ ಹಂತದಲ್ಲಿದೆ. ಪ್ರತೀದಿನ ನಾಡಿನ ವಿವಿಧ ಸಂಘಸಂಸ್ಥೆಗಳ ನೂರಾರು ಮಂದಿ ಸ್ವಯಂಸೇವಕರು ಹಗಲಿರುಳೆನ್ನದೆ ಶ್ರಮದಾನದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.