ನ್ಯೂಯಾರ್ಕ್: 'ಎಕ್ಸ್'ನಲ್ಲಿ ಇರುವಂತೆ ಸುಳ್ಳು ಸುದ್ದಿಯಿಂದ ಕೂಡಿದ ಪೋಸ್ಟ್‌ಗೆ ಬಳಕೆದಾರರೇ ಫ್ಯಾಕ್ಟ್‌ಚೆಕ್ ಮಾಡಿ ಟಿಪ್ಪಣಿ ಬರೆಯುವಂಥ ಕ್ರಮವನ್ನು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿಯೂ ಪರಿಚಯಿಸಲು ಮೆಟಾ ಮುಂದಾಗಿದೆ.
ಈ ಸಾಮಾಜಿಕ ವೇದಿಕೆಗಳಲ್ಲಿ ಇಲ್ಲಿಯವರೆಗೆ ಅಮೆರಿಕ ಮೂಲಕದ ಫ್ಯಾಕ್ಟ್‌ಚೆಕ್ ಸಂಸ್ಥೆಗಳಿಂದ ಮಾಡಲಾದ ಫ್ಯಾಕ್ಟ್‌ಚೆಕ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು.
ಫ್ಯಾಕ್ಟ್‌ಚೆಕ್ ಮಾಡುವವರು ಪಕ್ಷಪಾತಿಯಾಗಿದ್ದಾರೆ. ಆದ್ದರಿಂದ ಇಂಥವರು ಮಾಡಿದ ಫ್ಯಾಕ್ಟ್‌ಚೆಕ್‌ಗಳನ್ನು ಬಳಸಿಕೊಳ್ಳದಿರಲು ನಿರ್ಧರಿಸಲಾಗಿದೆ' ಎಂದು ಮೆಟಾ ಹೇಳಿದೆ.
ಅಮೆರಿಕದಿಂದ ಮೊದಲುಗೊಂಡು ಜಗತ್ತಿನಾದ್ಯಂತ ಈ ಕ್ರಮವನ್ನು ಮೆಟಾ ಜಾರಿಗೆ ತರಲಿದೆ.
'ತಮ್ಮ ಸಾಮಾಜಿಕ ವೇದಿಕೆಗಳಲ್ಲಿ ಯಾವ ವಿಷಯದ ಕುರಿತು ಪೋಸ್ಟ್ ಹಾಕಬೇಕು, ಹಾಕಬಾರದು ಎನ್ನುವ ಕುರಿತು ಬಹಳ ಕಠಿಣವಾದ ವ್ಯವಸ್ಥೆಯನ್ನು ಜಾರಿ ಮಾಡಿದ್ದೆವು. ಇದೇ ವ್ಯವಸ್ಥೆಯೊಂದಿಗೆ ಬಹಳ ದೂರ ಬಂದುಬಿಟ್ಟಿದ್ದೇವೆ. ಇಂಥದ್ದೊಂದು ವ್ಯವಸ್ಥೆಯ ಕಾರಣದಿಂದ 'ಹಲವು ತಪ್ಪು'ಗಳನ್ನೂ ಮಾಡಿದ್ದೇವೆ' ಎಂದು ಹೇಳಿದೆ.