ಬದಿಯಡ್ಕ: ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಉದ್ಯಮಿ ಆರ್ ಕೆ ನಾಯರ್ ಗುಜರಾತ್ ಅವರು ಭಾನುವಾರ ಶ್ರೀ ಕ್ಷೇತ್ರ ಪೆರಡಾಲಕ್ಕೆ ಆಗಮಿಸಿ ಶ್ರೀ ಕ್ಷೇತ್ರದ ಜಿರ್ಣೋದ್ಧಾರ ಕಾರ್ಯದ ಮಾಹಿತಿ ಪಡೆದುಕೊಂಡರು.. ಒಂದನೇ ಹಂತದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರದ ಶಾಶ್ವತ ಭೋಜನ ಶಾಲೆಗೆ ನೆಲಕ್ಕೆ ಶಿಲೆ ಹಾಸುವುದನ್ನು ಸೇವಾರೂಪದಲ್ಲಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ವತಿಯಿಂದ ಶಾಲು ಮತ್ತು ಸ್ಮರಣೆಕೆ ನೀಡಿ ಗೌರವಿಸಲಾಯಿತು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಟ್ರಸ್ಟಿ ಸೀತಾರಾಮ ನವಕ್ಕಾನ, ಕ್ಯಾಂಪ್ಕೋ ನಿರ್ದೇಶಕ ಪದ್ಮರಾಜ ಪಟ್ಟಾಜೆ, ಯುವ ಧಾರ್ಮಿಕ ಮುಂದಾಳು ರಾಜೇಶ್ ಮಾಸ್ತರ್ ಅಗಲ್ಪಾಡಿ, ಗಣೇಶ್ ಪ್ರಸಾದ್ ಕಡಪ್ಪು, ಯುವ ಸಮಿತಿ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ವಿನೋದ್ ವಿದ್ಯಾಗಿರಿ, ಸಂಘ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.