ಕಾಸರಗೋಡು: ಮಧೂರು ಸನಿಹದ ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಕಾರಂತ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆಡಳಿತ ಸೇವಾ ಸಮಿತಿ ಅಧ್ಯಕ್ಷ ಶೀನ ಶೆಟ್ಟಿ ಕಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು, ಗಣೇಶ್ ಭಂಡಾರಿ ನಡುಮನೆ,ಗೋಪಾಲಕೃಷ್ಣ ಶೆಟ್ಟಿ ಕಜೆ, ಸುಜೇಶ್ ಆಳ್ವ ನೀರಾಳ, ವಿಶ್ವನಾಥ ರೈ ಮಾಯಿಪಾಡಿ, ಉಮೇಶ್ ಶೆಟ್ಟಿ ಪಾಲ್ತೋಡು, ಜಯರಾಮ್ ರೈ ಸಿರಿಬಾಗಿಲು, ಚಂದ್ರಕಲಾ ನೀರಾಳ, ಸುಮಿತ್ರ ಮಯ್ಯ, ಅಮಿತಾ ಅಡ್ಕ, ನಳಿನಿ ಅಡ್ಕ, ವಸಂತಿ ಭಗವತಿ ನಗರ, ರಂಜಿತ ಮಾಯಿಪ್ಪಾಡಿ, ದಿವ್ಯ ಅಡ್ಕ, ಸುಪ್ರೀತಾ ಅಡ್ಕ, ಸವಿತಾ ಮಾಯಿಪಾಡಿ, ಶೈಲಜಾ ಮಾಯಿಪಾಡಿ, ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನದಲ್ಲಿ ಫೆ. 8ರಿಂದ 10ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿರುವುದು.