ಬದಿಯಡ್ಕ: ನೀರ್ಚಾಲಿನ ಪ್ರತಿಷ್ಠಿತ ಮಹಾಜನ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಹಿರಿಯ, ಕಿರಿಯ, ಹೈಸ್ಕೂಲು, ಹೈಯರ್ ಸೆಕೆಂಡರಿ ಹಾಗೂ ಹಳೆ ವಿದ್ಯಾರ್ಥಿ ಸಂಘಗಳ ಸಹಕಾರದೊಂದಿಗೆ ಇಂದು ಶಾಲಾ ಆವರಣದಲ್ಲಿ ನಡೆಯಲಿದೆ.
ಬೆಳಿಗಗ್ಗೆ 9.15 ಕ್ಕೆ ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಧ್ವಜಾರೋಹಣ ನಿರ್ವಹಿಸಿ ಚಾಲನೆ ನೀಡುವರು. ಅಪರಾಹ್ನ 1.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಬ್ಲಾ.ಪಂ.ಸದಸ್ಯ ಹಾಗೂ ಹೈಯರ್ ಸೆಕೆಂಡರಿಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುಕುಮಾರ ಕುದ್ರೆಪ್ಪಾಡಿ ಉದ್ಘಾಟಿಸುವರು. ಬ್ಲಾ.ಪಂ.ಸದಸ್ಯೆಯರಾದ ಜಯಂತಿ, ಜಯಶ್ರೀ ಬಹುಮಾನ ವಿತರಿಸುವರು. ಕಿರಿಯ ಪ್ರಾಥಮಿಕ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ವಿಜಯಕುಮಾರ್.ಪಿ., ಹೈಯರ್ ಸೆಕೆಂಡರಿ ಮಾತೃಸಂಘದ ಅಧ್ಯಕ್ಷೆ ಭವ್ಯ, ಕಿರಿಯ ಪ್ರಾಥಮಿಕ ಶಾಲಾ ಮಾತೃಸಂಘದ ಅಧ್ಯಕ್ಷೆ ಅಕ್ಷತಾ ಕೆ.ಎಂ.ಶುಭಾಶಂಸನೆಗೈಯ್ಯುವರು. ಅಪರಾಹ್ನ 2.45 ರಿಂದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ಸಂಜೆ 4 ಕ್ಕೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.