ಕಾಸರಗೋಡು: ಕೇಳುಗುಡ್ಡ್ಪೆ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನ:ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮಂದಿರದ ವರೆಗೆ ಜರುಗಿತು.
ಸಂಜೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಗೆ ಪೂರ್ಣಕುಂಭ ಸ್ವಾಗತ, ಸುದರ್ಶನ ಹೋಮ, ಸಾಂಸ್ಕøತಿಕ ಯೋಜನೆಯನ್ವಯ ನಾಟ್ಯಾರ್ಚನೆ, ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಜನವರಿ 1ರಂದು ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಶ್ರೀ ಅಯ್ಯಪ್ಪಸ್ವಾಮಿಯ ನೂತನ ರಜತಫಲಕ ಶೋಭಾ ಯಾತ್ರೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗತಂಬಿಲ, ಆಶ್ಲೇಷ ಪೂಜೆ, ಶ್ರೀಶಾಸ್ತಾ ಅಷ್ಟೋತ್ತರ ಶತನಾಮಾವಳಿ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಜ. 2ರಂದು ಬೆಳಗ್ಗೆ 7.30ಕ್ಕೆ ಅಷ್ಟೋತ್ತರ ಶತನಾಳಿಕೇರ ಹೋಮ, ಶ್ರೀ ಶನೀಶ್ವರ ಪೂಜೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 9.30ಕ್ಕೆ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ. 3ರಂದು ಬೆಳಗ್ಗೆ 9ಕ್ಕೆ ಎಡನೀರುಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ, 9.36ಕ್ಕೆ ನೂತನ ರಜತರೇಖಾ ಫಲಕ ಪ್ರತಿಷ್ಠೆ, ಧಾರ್ಮಿಕ ಸಭೆ ನಡೆಯಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನ ನೀಡುವರು. ಅಮ್ಮು ರೈ ಚಟ್ಲ ಅಧ್ಯಕ್ಷತೆ ವಹಿಸುವರು. ಕುಮ್ಮನಂ ರಾಜಶೇಖರನ್ ಧಾರ್ಮಿಕ ಭಾಷಣ ಮಾಡುವರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಭಜನೆ ನಡೆಯುವುದು.