ಕೊಚ್ಚಿ: ಕಾಲೂರು ಕ್ರೀಡಾಂಗಣದಲ್ಲಿ ಗಿನ್ನಿಸ್ ದಾಖಲೆಯ ನೃತ್ಯ ಕಾರ್ಯಕ್ರಮದ ವೇಳೆ ಗ್ಯಾಲರಿಯಿಂದ ಬಿದ್ದು ಶಾಸಕಿ ಉಮಾ ಥಾಮಸ್ ಗಾಯಗೊಂಡಿರುವ ಘಟನೆಯಲ್ಲಿ ಸಂಘಟಕರನ್ನು ಹೈಕೋರ್ಟ್ ಟೀಕಿಸಿದೆ.
ಶಾಸಕರಿಗೆ ಗಾಯವಾದ ಮೇಲೂ ಕಾರ್ಯಕ್ರಮವನ್ನು ಸ್ವಲ್ಪ ಸಮಯವಾದರೂ ಏಕೆ ನಿಲ್ಲಿಸಲಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಮಾನವೀಯತೆ ಇಲ್ಲವೇ ಎಂದು ಪ್ರಶ್ನಿಸಿದ ಏಕ ಸದಸ್ಯ ಪೀಠ ಗ್ಯಾಲರಿಯಿಂದ ಬಿದ್ದ ಉಮಾ ಥಾಮಸ್ ಅವರಿಗೆ ಏನಾಯಿತು ಎಂದು ತನಿಖೆ ನಡೆಸುವ ಜವಾಬ್ದಾರಿ ಸಂಘಟಕರಿಗೆ ಇಲ್ಲವೇ ಎಂದು ಪ್ರಶ್ನಿಸಿದರು. ಅರ್ಧ ಗಂಟೆ ಕಾರ್ಯಕ್ರಮ ನಿಲ್ಲಿಸಿದರೆ ಏನಾಗುತ್ತದೆ ಎಂದೂ ಕೋರ್ಟ್ ಕೇಳಿದೆ. ಶಾಸಕರ ಪರಿಸ್ಥಿತಿ ಹೀಗಾದರೆ ಜನ ಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದೆ.
ಉಮಾ ಥಾಮಸ್ ಅವರಿಗೆ ಸಂಘಟಕರು ಮಾಡಿದ್ದು ಕ್ರೌರ್ಯ ಎಂದೂ ಕೋರ್ಟ್ ಹೇಳಿದೆ. ಒಬ್ಬ ವ್ಯಕ್ತಿ ಕೆಳಗೆ ಬಿದ್ದು ಅವರ ತಲೆಗೆ ಗಾಯವಾದಾಗಲೂ ಕಾರ್ಯಕ್ರಮ ಮುಂದುವರಿಯಿತು, ಕನಿಷ್ಠ ಅವರು ಉಮಾ ಥಾಮಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗೂ ಕಾಯಬಹುದಿತ್ತು. ನೃತ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೈಗೆತ್ತಿಕೊಂಡಿದ್ದ ಹಣಕಾಸು ವಂಚನೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ವೇಳೆ ಏಕ ಪೀಠ ಟೀಕಿಸಿದೆ.