ಮಧೂರು : ಉಳಿಯ ತರುಣ ಕಲಾವೃಂದದ ಆಶ್ರಯದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ನಡೆಯಿತು. ಸಂಘದ ಅಧ್ಯಕ್ಷ ಸುರೇಶ್ ಯು. ಆರ್. ಧ್ವಜಾರೋಹಣಗೈದರು. ಅಂಗನವಾಡಿಯಲ್ಲಿ ವಾರ್ಡು ಸದಸ್ಯ ಬಶೀರ್ ಪಿ ಎ.ಧ್ವಜಾರೋಹಣ ನೆರವೇರಿಸಿದರು,. ಡಾ.ರಕ್ಷಾ ರಾಂಕಿಶೋರ್ ಆಸ್ರ, ಬಾಲಕೃಷ್ಣ ಉಳಿಯ, ಪದ್ಮರಾಜ ಗಟ್ಟಿ, ಅಜಿತ್ ಕುಮಾರ್, ವಿಮಲಾ ಟೀಚರ್, ಆನಂದಿ ಮೊದಲಾದವರು ಉಪಸ್ಥಿತರಿದ್ದರು. ಪ್ರಜಾಪ್ರಭುತ್ವ ದಿನಾಚರಣೆಯ ಮಹತ್ವವನ್ನು ತಿಳಿಸಲಾಯಿತು. ಪುಟಾಣಿಗಳು, ಹೆತ್ತವರು ಭಾಗವಹಿಸಿದ್ದರು.