HEALTH TIPS

ಕೆಲವು ಮಹಿಳೆಯರು ಸ್ತ್ರೀದ್ವೇಷಿಗಳು, ಅವರು ಪುರುಷ ಪ್ರಾಬಲ್ಯವನ್ನು ಒಪ್ಪಿಕೊಳ್ಳುತ್ತಾರೆ: ಪಿ. ಸತಿದೇವಿ

ಕೊಚ್ಚಿ: ಪುರುಷ ಪ್ರಾಬಲ್ಯವನ್ನು ಸೂಚ್ಯವಾಗಿ ಒಪ್ಪಿಕೊಳ್ಳುವ ಮೂಲಕ ಮಹಿಳೆಯರ ಒಂದು ವರ್ಗವು ಮಹಿಳಾ ವಿರೋಧಿ ನಿಲುವುಗಳನ್ನು ಅಳವಡಿಸಿಕೊಳ್ಳುವ ಪ್ರವೃತ್ತಿಯನ್ನು ಅನುಸರಿಸುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಅಡ್ವ.ಪಿ. ಸತಿದೇವಿ ಹೇಳಿರುವರು. ಇತ್ತೀಚೆಗೆ ಚಲನಚಿತ್ರ ತಾರೆಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ಮಾಡಿದ ಹೇಳಿಕೆಗಳು, ಸಂತ್ರಸ್ಥೆ ಕೂಡಾ ಮನುಷ್ಯ ಎಂಬುದನ್ನು ಪರಿಗಣಿಸದೆ ಮಾಡಲ್ಪಟ್ಟಿವೆ. ಸಾಮಾಜಿಕ ಮಾಧ್ಯಮಗಳ ಮೂಲಕ ಏನು ಬೇಕಾದರೂ ಕೆಟ್ಟದ್ದನ್ನು ಹೇಳಬಹುದಾದ ಪರಿಸ್ಥಿತಿ ಇದೆ ಎಮದವರು ವಿಶಾದ ವ್ಯಕ್ತಪಡಿಸಿದರು. 

ಅಪರಾಧಿಯ ಹೆಸರನ್ನು ಬಹಿರಂಗಪಡಿಸಬಾರದು ಎಂಬ ನಿಯಮದ ಬದಲು, ದೂರುದಾರರೆಂದು ಹೇಳಿಕೊಂಡು ಯಾರೋ ಒಬ್ಬರು ಮುಂದೆ ಬಂದಿರುವುದು ಮಹಿಳೆಯರು ಬಲವಾದ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಮತ್ತಷ್ಟು ಪುರಾವೆಯಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಎದುರಿಸಲು ದೇಶದಲ್ಲಿ ಪ್ರಬಲ ಕಾನೂನುಗಳಿವೆ. ಅವುಗಳನ್ನು ಇನ್ನೂ ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ಆದರೆ ಕೇರಳದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ನಿಭಾಯಿಸಿದ ರೀತಿ ಆಶಾದಾಯಕವಾಗಿದೆ. ಈ ವಿಷಯದಲ್ಲಿ ಕೇರಳವು ಬಹಳ ಬಲವಾದ ನಿಲುವನ್ನು ತೆಗೆದುಕೊಳ್ಳುತ್ತಿದೆ. ಹೇಮಾ ಸಮಿತಿ ವರದಿಯ ಆಧಾರದ ಮೇಲೆ ಕೇರಳದಲ್ಲಿ ಆದ ಬದಲಾವಣೆಗಳು ಈಗ ಇತರ ರಾಜ್ಯಗಳಲ್ಲಿಯೂ ಪ್ರತಿಫಲಿಸುತ್ತಿವೆ ಎಂದು ವಕೀಲೆ ಸತಿ ದೇವಿ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries