ನವದೆಹಲಿ: ಸುಧಾರಿತ ಹವಾಮಾನ ವಿಜ್ಞಾನವು ಪಾಕೃತಿಕ ವಿಕೋಪಗಳಿಂದ ಆಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಅದೇ ರೀತಿ ಭೂಕಂಪನದ ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನೂ ಅಭಿವೃದ್ದಿಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಭಾರತೀಯ ಹವಾಮಾನ ಇಲಾಖೆಯ 150 ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು, 'ಮಿಷನ್ ಮ್ಯೂಸಿಯಂ' ಯೋಜನೆಗೆ ಚಾಲನೆ ನೀಡಿದರು.
ಮಿಷನ್ ಮ್ಯೂಸಿಯಂ, ಹವಾಮಾನ ಮತ್ತು ವಾತಾವರಣದ ಬದಲಾವಣೆ ಬಗ್ಗೆ ತಿಳಿಯಲು ಹೆಚ್ಚು ಸಹಾಯಕವಾಗಿದೆ. ಅಲ್ಲದೆ ಗಾಳಿಯ ಗುಣಮಟ್ಟದ ಅಂಕಿ ಅಂಶವನ್ನೂ ಇದು ನೀಡಲಿದೆ.
ಹವಾಮಾನ ಇಲಾಖೆಯು ದೇಶಕ್ಕೆ ವಿಪತ್ತುಗಳನ್ನು ನಿರ್ವಹಿಸುವ ಶಕ್ತಿಯನ್ನು ನೀಡುತ್ತದೆ. ಪಾಕೃತಿಕ ವಿಕೋಪಗಳ ಪರಿಣಾಮವನ್ನು ತಡೆಯಲು ಇಲಾಖೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಪ್ರತಿಪಾದಿಸಿದರು.