ಕೊಟ್ಟಾಯಂ: ಶಬರಿಮಲೆ ಗ್ರೀನ್‍ಫೀಲ್ಡ್ ವಿಮಾನ ನಿಲ್ದಾಣದ ಸಾಮಾಜಿಕ ಪರಿಣಾಮ ಅಧ್ಯಯನದ ಅಂತಿಮ ವರದಿ ಸಲ್ಲಿಸಲಾಗಿದೆ.
ತೃಕ್ಕಾಕರ ಭಾರತ ಮಾತಾ ಕಾಲೇಜಿನ ಸಮಾಜಕಾರ್ಯ ವಿಭಾಗ ಸಿದ್ಧಪಡಿಸಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ವರದಿಯಲ್ಲಿ ವಿಶೇಷ ಪ್ಯಾಕೇಜ್ ಜಾರಿಗೊಳಿಸಿ ಭೂಮಿ ಕಳೆದುಕೊಂಡ ಕುಟುಂಬಗಳ ಪುನರ್ವಸತಿ ಮತ್ತು ಪರಿಹಾರವನ್ನು ಖಾತ್ರಿಪಡಿಸಬೇಕು ಎಂದು ಹೇ:;ಆಗಿದೆ. ವರದಿಯನ್ನು ಅಧ್ಯಯನ ಮಾಡಿ, ಶಿಫಾರಸು ಸಲ್ಲಿಸಲು ತಜ್ಞರ ಸಮಿತಿಯನ್ನು ನೇಮಿಸಬೇಕು. ಅವರು ಯೋಜನೆಯಲ್ಲಿ ತೊಡಗಿರುವ ಜನರನ್ನು ಭೇಟಿ ಮಾಡಿ ಶಿಫಾರಸುಗಳನ್ನು ಸರ್ಕಾರಕ್ಕೆ ರವಾನಿಸಬೇಕು.
ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ, ಉಪಯುಕ್ತವಲ್ಲದ ಭೂಮಿಯನ್ನು ಕೂಡಾ ಸ್ವಾಧೀನಪಡಿಸಿಕೊಳ್ಳುವುದು ಅಪೇಕ್ಷಣೀಯವಾಗಿದೆ ಎಂದು ಶಿಫಾರಸು ಮಾಡಲಾಗಿದೆ. ಯೋಜನೆಯ ನಿರ್ಮಾಣ ಹಂತದಲ್ಲಿ 8000 ಕಾರ್ಮಿಕರು ಅಗತ್ಯವಿದೆ. ಈ ಕಾರ್ಮಿಕರನ್ನು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳುವಂತೆಯೂ ವರದಿಯಲ್ಲಿ ಹೇಳಲಾಗಿದೆ. ಯೋಜನೆಗಾಗಿ 25 70 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಇದರಲ್ಲಿ 2363 ಎಕರೆ ಚೆರುವಳ್ಳಿ ಎಸ್ಟೇಟ್ ಮತ್ತು 307 ಎಕರೆ ವಿವಿಧ ವ್ಯಕ್ತಿಗಳಿಗೆ ಸೇರಿದೆ.