ಕುಂಬಳೆ: ಅನುವಾದಿತ ಕೃತಿ ಭೂತದ ಹಾಡುಗಳು ಬಿಡುಗಡೆ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಮಂಗಳವಾರ ಸಂಜೆ ನಡೆಯಿತು. ಬೆಂಗಳೂರಿನ ದ್ರಾವಿಡಂ ಪಬ್ಲಿಕೇಷನ್ಸ್ ಪ್ರಕಾಶಿಸಿರುವ ಕೃತಿಯನ್ನು ಡಾ.ಸುಷ್ಮಾ ಶಂಕರ್ ಅನುವಾದಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅನುವಾದಕ ಕೆ.ವಿ.ಕುಮಾರನ್ ಅವರು ಡಾ.ಕೆ.ಕಮಲಾಕ್ಷ ಅವರಿಗೆ ನೀಡಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಜ್ಞಾನದ ಬೆಳಕು ಎಲ್ಲೆಡೆ ಪಸರಿಸಬೇಕೆಂಬುದೇ ಅನುವಾದದ ಮೂಲ ಲಕ್ಷ್ಯ.ವಿವಿಧ ಭಾಷೆಗಳ ಉದ್ಗ್ರಂಥಗಳು ಮತ್ತೊಂದಕ್ಕೆ ಅನುವಾದಗೊಂಡಾಗ ಪರಸ್ಪರ ಅರಿವಿನ ಹಂಚಿಕೆಯಾಗಿ ಗೋಡೆಗಳಾಚಚೆಗಿನ ವಿದ್ಯಮಾನಗಳೂ ನಮ್ಮೊಳಗೆ ಆವಾಹಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ವಿಶ್ರಾಂತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರೊ.ಎ.ಶ್ರೀನಾಥ್, ಕವಿ, ಪತ್ರಕರ್ತ ರವೀಂದ್ರನ್ ಪಾಡಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟತ್ತೋಡಿ, ಡಾ.ಕೆ.ಕಮಲಾಕ್ಷ, ಪ್ರೊ. ರಾಕೇಶ್, ನಿಥಿನ್ ಮತ್ತಿತರರು ಉಪಸ್ಥಿತರಿದ್ದರು. ಡಾ.ಕೆ.ವಾಮನ ರಾವ್ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.