ನಿಲಂಬೂರು: ನಿಲಂಬೂರು ಅರಣ್ಯ ಕಚೇರಿಯನ್ನು ಡಿಎಂಕೆ ಕಾರ್ಯಕರ್ತರು ಧ್ವಂಸಗೊಳಿಸಿದ ಘಟನೆಯ ನಂತರ ಬಂಧಿತರಾಗಿರುವ ಶಾಸಕ ಪಿ.ವಿ.ಅನ್ವರ್‍ಗೆ ಜಾಮೀನು ನೀಡಲಾಗಿದೆ.
ನಿಲಂಬೂರ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರತಿ ವ್ಯಕ್ತಿಗೆ 50000 ರೂ.ಠೇವಣಿ, ಪ್ರತಿ ಬುಧವಾರ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದ್ದು, ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿದ್ದಕ್ಕಾಗಿ 35,000 ರೂಪಾಯಿಗಳನ್ನು ದಂಡ ವಿಧಿಸಿದೆ. ಕಸ್ಟಡಿಗೆ ನೀಡಬೇಕೆಂಬ ಪೋಲೀಸರ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಮೊನ್ನೆ ರಾತ್ರಿ 9.45ರ ಸುಮಾರಿಗೆ ನಿಲಂಬೂರು ಪೋಲೀಸರು ಅನ್ವರ್‍ನನ್ನು ಅವರ ಮನೆಗೆ ಸುತ್ತುವರಿದು ಬಂಧಿಸಿದ್ದರು. ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ರಿಮಾಂಡ್‍ಗೆ ಒಪ್ಪಿಸಲಾಗಿತ್ತು. ಪಿವಿ ಅನ್ವರ್ ಸೇರಿದಂತೆ 11 ಮಂದಿ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು, ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸುವುದು ಮೊದಲಾದ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.