ಮಂಜೇಶ್ವರ: ನಾಡೋಜ ಕಯ್ಯಾರ ಕಿಞ್ಞಣ್ಣ ರೈಗಳ ಬದುಕು ಬರಹಗಳು ವಿಸ್ಕøತ ಮಟ್ಟದಲ್ಲಿ ಬೆಳೆಯಲು ಅವರ ಬಾಲ್ಯ ಮತ್ತು ಕಲಿಕಾ ಕ್ಷೇತ್ರದಲ್ಲಿ ಗಾಢ ಪ್ರಭಾವ ಬೀರಿದ್ದ ಕಾಸರಗೋಡಿನ ಬಹುಭಾಷೆ, ಸಂಸ್ಕøತಿಗಳು ಪ್ರಧಾನ ಕಾರಣವಾಗಿತ್ತು. ಕನ್ನಡ, ಸಂಸ್ಕøತ ಹಾಗೂ ಆಂಗ್ಲ ಸಹಿತ ಹಲವು ಭಾಷೆಗಳ ತಲಸ್ಪರ್ಶಿ ಜ್ಞಾನದ ಖನಿಯಾಗಿದ್ದ ಅವರು ತಮ್ಮ ಜೀವನ ಪೂರ್ತಿ ಕಾಸರಗೋಡಿನ ಸಮಗ್ರ ಕ್ಷೇತ್ರದ ಬೆಳವಣಿಗಾಗಿ ಮುಡಿಪಾಗಿಟ್ಟವರು. ಇದರ ಹಿಂದೆ ರಾಷ್ಟ್ರಕವಿ ಗೋವಿಂದ ಪೈಗಳ ಪ್ರೇರಣೆ ಇತ್ತು ಎಂದು ಬದಿಯಡ್ಕದ ಕವಿ ನಿಲಯ ಕವಿತಾ ಕುಟೀರದ ಕಾರ್ಯದರ್ಶಿ ಡಾ.ಪ್ರಸನ್ನ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯ ಗಿಳಿವಿಂಡು ಮಂಜೇಶ್ವರ ಇದರ ಆಶ್ರಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಮಂಗಳವಾರ ಅಪರಾಹ್ನ ಗೋವಿಂದ ಪೈ ಸ್ಮಾರಕ ಗಿಳಿವಿಂಡಲ್ಲಿ ನಡೆದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ನಾಡೋಜ ಕಿಞ್ಞಣ್ಣ ರೈ ಕೃತಿ-ಸ್ಮøತಿ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಕಯ್ಯಾರರು ಮತ್ತು ಗೋವಿಂದ ಪೈಗಳ ಸಂಪರ್ಕ-ಆಂತರಿಕ ಸಂವೇದನೆಗಳ ಬಗ್ಗೆ ಮಾತನಾಡಿದ ಅವರು, ಕಯ್ಯಾರರು ರಚಿಸಿದ ಗೀತೆಗಳನ್ನು ಆಲಪಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಅವರು ಮಾತನಾಡಿ, ಕಯ್ಯಾರರ ಪ್ರಕೃತಿ ಸಂವೇದನೆಯ ಬರಹಗಳು ಅನುಭವ ಮುಖದಿಂದ ಉದ್ಗøತವಾದಂತದ್ದು. ಇಂದು ಕಾಸರಗೋಡಿನ ಹೊಸ ತಲೆಮಾರಿಗೆ ಕಯ್ಯಾರ-ಗೋವಿಂದ ಪೈಗಳೇ ಮೊದಲಾದ ಮಹಾನ್ ಚೇತನಗಳ ಕೊಡುಗೆಗಳನ್ನು ತಿಳಿಯುವ ಕುತೂಹಲ ಕ್ಷೀಣಿಸಿರುವುದು ದೌರ್ಭಾಗ್ಯಕರ. ವ್ಯರ್ಥ ಕಾಲಯಾಪನೆಯ ವಿಷಯಗಳಲ್ಲಿ ಆಸಕ್ತರಾದ ಯುವ ಸಮೂಹವನ್ನು ಮರಳಿ ಸಾಹಿತ್ಯ-ಜಾನಪದ ಕಲಾ ಪ್ರಕಾರಗಳತ್ತ ಆಕರ್ಷಿಸುವ ತುರ್ತು ಕಾರ್ಯಸಾಧ್ಯತೆಗಳನ್ನು ಕಂಡುಕೊಳ್ಳಬೇಕು ಎಂದರು. ಮತಗಳನ್ನು ಮೀರಿದ ಮಾನವೀಯತೆಯ ಸಾಂದ್ರ ಹೃದಶವಿಶಾಲತೆ ಇಂದಿಗೆ ಅಗತ್ಯ ಎಂದರು.
ಮಂಗಳೂರಿನ ಆರ್ಟ್ ಕೆನರಾ ಟ್ರಸ್ಟಿನ ಕಾರ್ಯದರ್ಶಿ ನೇಮಿರಾಜ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಮಹಾಕವಿ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಉಮೇಶ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅವರು ಮಾತನಾಡಿ,ನೀನು ಪಾಂಡಿತ್ಯದ ಹಿಮಾಚಲ ಶಿಖರ, ಗೌರೀಶಂಕರ,ನಿನ್ನ ಬಣ್ಣಿಸಳನ್ನಳವೆ ನಾನು ಕಿರಿಯವ ಕವಿ ಕಿಂಕರ ಎಂದು ಗೋವಿಂದ ಪೈಗಳನ್ನು ಉದ್ದೇಶಿಸಿ ಬರೆದಿರುವ ಕಾವ್ಯ ಸಾಲುಗಳು ಅವರೀರ್ವರ ಸಂಬಂಧದ ದ್ಯೋತಕ. ಅಧ್ಯಾಪಕ, ಸಾಹಿತಿ, ವಿಮರ್ಶಕ, ಆಡಳಿಗಾರ, ಪತ್ರಕರ್ತ, ಸ್ವಾತಂತ್ರ್ಯ, ಏಕೀಕರಣ, ವಿಲೀನೀಕರಣ ಹೋರಾಟಗಾರರಾಗಿ ದಶಮುಖದ ಅವರ ಚಟುವಟಿಕೆ ಅಸಾಮಾನ್ಯವಾದುದು. ಕಯ್ಯಾರರ ಬರಹ-ಬದುಕಿನ ಬಗೆಗಿನ ಇಂತಹ ಕಾರ್ಯಕ್ರಮ ಸ್ತುತ್ಯರ್ಹ ಎಂದರು.ಕಯ್ಯಾರರ ಹಿರಿಯ ಪುತ್ರ ದುರ್ಗಾಪ್ರಸಾದ್ ರೈ ಉಪಸ್ಥಿತರಿದ್ದರು.ಗಾಯಕ ದಿವಾಕರ ಅಶೋಕ ನಗರ ಅವರು ಕಯ್ಯಾರರ ತುಳು ಕವನ ಹಾಡಿದರು.
ಗ್ರಂಥಾಲಯದ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಜಯಂತ ಮಾಸ್ತರ್ ವಂದಿಸಿದರು.
ಈ ಸಂದರ್ಭ ಕಯ್ಯಾರರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಬಗೆಗೆ ಬರೆದು ಪ್ರಸ್ತುತ ಮುದ್ರಣದಲ್ಲಿಲ್ಲದ ಕೃತಿಯ ಮರು ಮುದ್ರಣಕ್ಕೆ ಕಯ್ಯಾರರ ಕುಟುಂಬ ಹಕ್ಕುಪತ್ರವನ್ನು ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯ ಗಿಳಿವಿಂಡು ಸಂಸ್ಥೆಗೆ ಹಸ್ತಾಂತರಿಸಿದರು. ಉಮೇಶ್ ಎಂ.ಸಾಲ್ಯಾನ್ ಹಕ್ಕುಪತ್ರ ಸ್ವೀಕರಿಸಿ ಕನ್ನಡ ಪುಸ್ತಕ ಪ್ರಾಧಿಕಾರದ ನೆರವಿನಿಂದ ಶೀಘ್ರ ಈ ಕೃತಿ ಮರುಮುದ್ರಣಗೊಂಡು ಓದುಗರ ಕೈಸೇರಲಿದೆ ಎಂದು ತಿಳಿಸಿದರು.