ತಿರುವನಂತಪುರ: ಮೆಪ್ಪಾಡಿ ದುರಂತದಲ್ಲಿ ನಾಪತ್ತೆಯಾದವರನ್ನು ಮೃತರೆಂದು ಪರಿಗಣಿಸುವ ಪ್ರಕ್ರಿಯೆ ಜನವರಿ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಚಿವ ಕೆ.ರಾಜನ್ ತಿಳಿಸಿದರು.
ನಾಪತ್ತೆಯಾದವರ ಕುಟುಂಬಗಳಿಗೆ ಜನವರಿಯಲ್ಲಿಯೇ ಪರಿಹಾರ ನೀಡಲಾಗುವುದು ಎಂದ ಅವರು, ಪರಿಹಾರ ಸಿಗದೇ ವಿಳಂಬವಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದಿರುವರು.
ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ನಾಪತ್ತೆಯಾದರೆ, ಏಳು ವರ್ಷಗಳ ನಂತರ ಅವರನ್ನು ಮೃತ ಎಂದು ಪರಿಗಣಿಸಲಾಗುತ್ತದೆ.
ನಾಪತ್ತೆಯಾದವರ ಪಟ್ಟಿಯನ್ನು ಈ ತಿಂಗಳು ಸಿದ್ಧಪಡಿಸಲಾಗುವುದು ಮತ್ತು ಈ ತಿಂಗಳು ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಎರಡು ತಿಂಗಳೊಳಗೆ ಮರಣ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ವಯನಾಡು ಮುಂಡಕೈ-ಚುರಲ್ಮಲಾ ದುರಂತದಲ್ಲಿ ಮೃತಪಟ್ಟವರ ಅವಲಂಬಿತರಿಗೆ ನೀಡುವ ಆರ್ಥಿಕ ನೆರವನ್ನು ನಾಪತ್ತೆಯಾದವರ ಅವಲಂಬಿತರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಪಟ್ಟಿ ಸಿದ್ಧಪಡಿಸಲಾಗುವುದು ಪ್ರಾದೇಶಿಕ ಮಟ್ಟದ ಸಮಿತಿ ಸಿದ್ಧಪಡಿಸಿದ ಪಟ್ಟಿಗೆ ರಾಜ್ಯ ಮಟ್ಟದ ಸಮಿತಿ ಅಂತಿಮ ರೂಪ ನೀಡಲಿದೆ.
ಮೇಪ್ಪಾಡಿ ದುರಂತದಲ್ಲಿ ನಾಪತ್ತೆಯಾದವರನ್ನು ಮೃತರೆಂದು ಘೋಷಿಸುವ ಪ್ರಕ್ರಿಯೆ ಜನವರಿ ವೇಳೆಗೆ ಪೂರ್ಣ: ಸಚಿವ ಕೆ.ರಾಜನ್
0
ಜನವರಿ 14, 2025
Tags