ಕೋಝಿಕ್ಕೋಡ್: ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪುರುಷ ಮತ್ತು ಮಹಿಳೆಯ ನಡುವಿನ ಸಮಾನತೆಯನ್ನು ತಾನು ಒಪ್ಪುವುದಿಲ್ಲ ಎಂದು ಪಿಎಂಎ ಸಲಾಂ ಹೇಳಿದ್ದಾರೆ. ಪುರುಷರು ಮತ್ತು ಮಹಿಳೆಯರು ಸಮಾನರು ಎಂಬುದನ್ನು ಜಗತ್ತು ಒಪ್ಪಿಕೊಂಡಿಲ್ಲ. ಇದು ಮಾನವ ತರ್ಕಕ್ಕೆ ವಿರುದ್ಧವಾದ ಅಪ್ರಾಯೋಗಿಕ ವಾದ ಎಂದು ಪಿಎಂಎ ಸಲಾಂ ಹೇಳಿದರು.
"ಈ ಒಲಿಂಪಿಕ್ಸ್‍ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆ ಏಕೆ ಮಾಡಲಾಗಿತ್ತು? ಎರಡೂ ಬೇರೆ ಬೇರೆಯಾಗಿರುವುದರಿಂದ ಅಲ್ಲವೇ? ಎರಡೂ ಸಮಾನ ಎಂದು ಹೇಳುವುದು ಕುರುಡಲ್ಲವೇ? ಮಹಿಳೆಯರಿಗೆ ಪ್ರತ್ಯೇಕ ಆಸನಗಳು ಬಸ್ಸಲ್ಲಿರುತ್ತವೆ , ಇದನ್ನು ಏಕೆ ಮಾಡಲಾಗುತ್ತಿದೆ? ಮಹಿಳೆಯರಿಗೆ ಪ್ರತ್ಯೇಕ ಮೂತ್ರ ವಿಸರ್ಜನೆ ಸ್ಥಳಗಳಿಲ್ಲವೇ? ಇದನ್ನು ಏಕೆ ಮಾಡಲಾಗುತ್ತಿದೆ?" ಎಂದು ಪಿಎಂಎ ಸಲಾಂ ಕೇಳಿರುವರು.
"ಜನರು ಅಪ್ರಾಯೋಗಿಕ ಮತ್ತು ಮಾನವ ತರ್ಕಕ್ಕೆ ವಿರುದ್ಧವಾದ ವಾದಗಳನ್ನು ಏಕೆ ತರುತ್ತಾರೆ ಎಂಬುದರ ಕುರಿತು ಮುಸ್ಲಿಂ ಲೀಗ್ ಸ್ಪಷ್ಟ ಅಭಿಪ್ರಾಯವನ್ನು ಹೊಂದಿದೆ. ನಾವು ಸಮಾನತೆಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಪಿಎಂಎ ಸಲಾಂ ಹೇಳಿದರು. ಸಾಮಾಜಿಕ ನ್ಯಾಯದ ಅಗತ್ಯವಿದೆ ಎಂದು ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ ಹೇಳಿದರು.
ಪುರುಷರು ಮತ್ತು ಮಹಿಳೆಯರು ಸಮಾನರಲ್ಲ ಎಂಬುದು ಮುಸ್ಲಿಂ ಲೀಗ್‍ನ ರಾಜಕೀಯ ನಿಲುವು ಎಂದು ಪಿಎಂಎ ಸಲಾಂ ಒತ್ತಿ ಹೇಳಿದರು. ಅವರು ಮಾಧ್ಯಮಗಳೊಮದಿಗೆ ಮಾತನಾಡುತ್ತಿದ್ದರು.