ತಿರುವನಂತಪುರಂ: ವಯನಾಡ್ ಭೂಕುಸಿತ ದುರಂತದಲ್ಲಿ ನಾಪತ್ತೆಯಾದವರನ್ನು ಮೃತಪಟ್ಟಿರುವರೆಂದು ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಕಾಣೆಯಾದವರನ್ನು ಮೃತರಾಗಿರುವರೆಮದು ಪರಿಗಣಿಸಬೇಕು ಎಂಬುದು ಸಂತ್ರಸ್ತರ ಪ್ರಮುಖ ಬೇಡಿಕೆಯಾಗಿತ್ತು.
ಮೃತರ ಅವಲಂಬಿತರಿಗೆ ಆರ್ಥಿಕ ನೆರವು ನೀಡಲು ಎರಡು ಸಮಿತಿಗಳನ್ನು ರಚಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಸ್ಥಳೀಯ ಸಮಿತಿ ಮತ್ತು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಸ್ಥಳೀಯ ಸಮಿತಿಯು ಮೊದಲು ಮೃತರ ಪಟ್ಟಿ ಸಿದ್ಧಪಡಿಸಲಿದೆ.
ಚೂರಲ್ಮಲಾ ಮತ್ತು ಮುಂಡಕೈ ಭೂಕುಸಿತ ಸಂಭವಿಸಿ ನಾಲ್ಕು ತಿಂಗಳುಗಳು ಕಳೆದರೂ, 32 ಮಂದಿ ಜನರು ಇನ್ನೂ ನಾಪತ್ತೆಯಾಗಿದ್ದಾರೆ.