ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನ 1973 ರ ಪದವಿ ವಿದ್ಯಾರ್ಥಿಗಳ ಐದನೇ ಸಂಗಮ ಕಾಲೇಜು ಆಡಿಟೋರಿಯಂನಲ್ಲಿ ನಡೆಯಿತು.
99 ಮಂದಿ ಸದಸ್ಯರಿರುವ ಹಳೆ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮದಲ್ಲಿ ಎ.ಕರುಣಾಕರನ್ ನಾಯರ್ ಅಧ್ಯಕ್ಷತೆ ವಹಿಸಿದರು. ರಘುನಾಥ್ ಸಿ.ಸಿ, ಅರವಿಂದನ್ ಎನ್.ವಿ, ಮೋಹನನ್ ನಾಯರ್ ಕೆ., ವಿಜಯನ್ ಕೆ., ಮೋಹನನ್ ನಂಬ್ಯಾರ್ ಕೆ.ಎನ್., ಎಸ್.ಕೆ.ಅಬ್ದುಲ್ಲ ಮೊದಲಾದವರು ನೇತೃತ್ವ ನೀಡಿದರು.