ಕಾಸರಗೋಡು: ನ್ಯಾಶನಲ್ ವಿಶ್ವಕರ್ಮ ಫೆಡರೇಶನ್(ಎನ್‍ವಿಎಫ್) ಜಿಲ್ಲಾ ಮಟ್ಟದ ಸಂಘಟನಾ ತರಗತಿ ನಡೆಯಿತು. ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ ಆಚಾರ್ಯ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ವಿಷ್ಣು ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ವಾಸಂತಿ ಜೆ.ಆಚಾರ್ಯ, ಚಂದ್ರನ್ ವೆಳ್ಳರಿಕುಂಡು, ಎ.ಕೆ.ರಾಮಕೃಷ್ಣನ್, ಹರೀಶ್ ಅಡ್ಕ, ಸುಭಾಷ್ ದಾಮೋದರನ್, ಪುರುಷೋತ್ತಮ ಆಚಾರ್ಯ, ಓಮನ ಅಂಬಿ ಮೊದಲಾದವರು ಮಾತನಾಡಿದರು.