ತಿರುವನಂತಪುರ: ಕಸ ಎಸೆಯುವ ಕಾನೂನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಸ್ಥಳೀಯಾಡಳಿತ ಇಲಾಖೆ ಸಾರ್ವಜನಿಕರ ನೆರವು ಕೋರಿದೆ.
ಸಾರ್ವಜನಿಕರು ಸಾರ್ವಜನಿಕ ಸ್ಥಳಗಳು ಮತ್ತು ಜಲಾನಯನ ಪ್ರದೇಶಗಳಲ್ಲಿ ಕಸ ಎಸೆಯುವವರ ಪೋಟೋಗಳು ಅಥವಾ ವೀಡಿಯೊಗಳನ್ನು ವಾಟ್ಸಾಪ್ ಸಂಖ್ಯೆ 9446 700 800 ಗೆ ಕಳುಹಿಸಬಹುದು. ವ್ಯಕ್ತಿಯನ್ನು ಗುರುತಿಸುವ ಅಥವಾ ವಾಹನದ ಸಂಖ್ಯೆಯನ್ನು ಗುರುತಿಸುವ ರೀತಿಯಲ್ಲಿ ಅದನ್ನು ಕಳುಹಿಸಬೇಕು. ಅಂತಹ ಉಲ್ಲಂಘನೆಗಳನ್ನು ಪರಿಶೀಲಿಸಿದ ನಂತರ 10,000 ರೂ.ಗಳ ದಂಡವನ್ನು ವಿಧಿಸಿದರೆ, ಮಾಹಿತಿದಾರರಿಗೆ 2,500 ರೂ.ಇನಾಮು ನೀಡಲಾಗುತ್ತದೆ. ಈ ಸೌಲಭ್ಯವನ್ನು ಬಳಸಿಕೊಂಡು ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಸಾರ್ವಜನಿಕರು ಸಾಧ್ಯವಾದಷ್ಟು ಮುಂದಾಗಬೇಕು ಎಂದು ಸ್ಥಳೀಯಾಡಳಿತ ಮತ್ತು ಅಬಕಾರಿ ಸಚಿವ ಎಂ.ಬಿ.ರಾಜೇಶ್ ವಿನಂತಿಸಿದ್ದಾರೆ.