ಕಾಸರಗೋಡು: ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್(19) ಹಾಗೂ ಶರತ್ ಲಾಲ್(25)ಕೊಲೆ ಪ್ರಕರಣದಲ್ಲಿ ಎರ್ನಾಕುಳಂ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪಿನನ್ವಯ ಶಿಕ್ಷೆಗೊಳಗಾಗಿದ್ದ ಸಿಪಿಎಂ ಮುಖಂಡ ಕೆ.ವಿ ಕುಞÂರಾಮನ್ ಸೇರಿದಂತೆ ನಾಲ್ಕು ಮಂದಿ ಆರೋಪಿಗಳಿಗೆ ಹೈಕೋರ್ಟು ಜಾಮೀನು ಮಂಜೂರುಗೊಳಿಸಿದೆ. ಅಲ್ಲದೆ ಇವರಿಗೆ ಕೆಳ ನ್ಯಾಯಾಲಯ ವಿದಿಸಿದ್ದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂ. ದಂಡವನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಪ್ರಕರಣದಲ್ಲಿ ಮಾಜಿ ಶಾಸಕ ಕೆ.ವಿ ಕುಞÂರಾಮನ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್, ರಾಘವನ್ ವೆಳುತ್ತೋಳಿ ಹಾಗೂ ಕೆ.ವಿ ಭಾಸ್ಕರನ್ ಎಂಬವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ರೂ. ದಂಡ ವಿಧಿಸಲಾಗಿತ್ತು. ಆರೋಪಿಗಳನ್ನು ಪೊಲೀಸ್ ಕಸ್ಟಡಿಯಿಂದ ಬಲವಂತವಾಗಿ ಬಿಡಿಸಿಕೊಂಡಿರುವ ಆರೋಪ ಇವರ ಮೇಲಿದೆ.
ಪ್ರಸಕ್ತ ಆರೋಪಿಗಳೆಲ್ಲರೂ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. 2019 ಫೆಬ್ರವರಿ 17 ರಂದು ರಾತ್ರಿ ಬೈಕಲ್ಲಿ ಸಂಚರಿಸುತ್ತಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್ ಲಾಲ್ ಎಂಬವರನ್ನು ತಂಡ ಬರ್ಬರವಾಗಿ ಕೊಲೆ ನಡೆಸಲಾಗಿತ್ತು.