ಗುವಾಹಟಿ: ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ವಿಶ್ವದ ಬೃಹತ್ ಅಣೆಕಟ್ಟು ನಿರ್ಮಾಣಕ್ಕೆ ಚೀನಾವು ಮುಂದಾಗಿದ್ದು, ಇದರಿಂದ ನದಿಯ ಪರಿಸರಕ್ಕೆ ಆಪತ್ತುಂಟಾಗಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ.
'ಅಣೆಕಟ್ಟು ನಿರ್ಮಾಣದಿಂದ ನಮಗೆ ದೊಡ್ಡ ಸಮಸ್ಯೆ ಉಂಟಾಗಲಿದೆ.
ನದಿ ಪಾತ್ರದಲ್ಲಿನ ಕೆಳಭಾಗದಲ್ಲಿ ಹರಿವು ಬತ್ತಲಿದೆ. ಇಡೀ ವ್ಯವಸ್ಥೆಯು ದುರ್ಬಲಗೊಳ್ಳಲಿದೆ. ಆತಂಕದ ಈ ವಿಷಯವನ್ನು ಈಗಾಗಲೇ ಕೇಂದ್ರದೊಂದಿಗೆ ಪ್ರಸ್ತಾಪಿಸಿದ್ದೇವೆ' ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಸಹ ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.