ತಿರುವನಂತಪುರ: ರಾಜ್ಯ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ತಾರೆಯರಾದ ಆಸಿಫ್ ಅಲಿ ಮತ್ತು ಟೊವಿನೋ ಥಾಮಸ್ ಮಿಂಚಿದರು.
ರಾಜ್ಯ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ನಟ ಆಸಿಫ್ ಅಲಿ, ನಾನು ಇದುವರೆಗೆ ಯುವಜನೋತ್ಸವದಲ್ಲಿ ಸ್ಥಾನ ಪಡೆದಿಲ್ಲ. ನಾನು ಈ ಹಂತಕ್ಕೆ ತಲುಪಲು ಸಿನಿಮಾ ಕಾರಣ. ಇಲ್ಲಿ ನಿಂತಿರುವುದು ನನಗೆ ಬಹಳ ಹೆಮ್ಮೆ ಅನಿಸುತ್ತಿದೆ. ಕಲೆಯನ್ನು ಬಿಟ್ಟುಕೊಡಬೇಡಿ ಎಂದ ಅವರು ನಟರು ತಮ್ಮಲ್ಲಿರುವ ಕಲೆಯನ್ನು ಜೀವನದ ಹಾದಿಯಲ್ಲಿ ಮುಂದುವರಿಸಬೇಕು. ಕಲೋತ್ಸ ವಿಜೇತರಾದ ತ್ರಿಶೂರ್ ಜಿಲ್ಲೆಯ ಮಕ್ಕಳಿಗೆ ಹೊಸ ಚಿತ್ರದ ಉಚಿತ ಟಿಕೆಟ್ ನೀಡಲಾಗುವುದು ಎಂದು ಆಸಿಫ್ ಅಲಿ ತಿಳಿಸಿದ್ದಾರೆ.
ಇದೇ ವೇಳೆ ಟೊವಿನೋ ಥಾಮಸ್ ಮಾತನಾಡಿ, ನೆಮ್ಮದಿ ಹಾಗೂ ಶಾಂತಿಯಿಂದ ಬದುಕಲು ಜೀವನ ಪರ್ಯಂತ ಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಈ ಮಕ್ಕಳು ಭವಿಷ್ಯದ ಭರವಸೆಗಳಾಗಿ ಬೆಳೆಯುತ್ತಾರೆ ಎಂಬುದು ಹೆಮ್ಮೆ ಮತ್ತು ನಿಖರ ವಿಷಯವಾಗಿದೆ. ಸಂಘಟಕರು, ಶಿಕ್ಷಣ ಇಲಾಖೆ, ಇತರ ಸಮಿತಿಗಳು ಮತ್ತು ವಿಜೇತರು ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ನಟ ಟೊವಿನೋ ಥಾಮಸ್ ತಿಳಿಸಿದರು. ಜೊತೆಗೆ ಕಡಿಮೆ ಅಂತರದಲ್ಲಿ ಸೋಲನುಭವಿಸಿದ ಮತ್ತು ಅದರಿಂದ ಗೆಲುವಿಗೆ ವಿಫಲರಾದವರು ಅವಕಾಶಗಳಿಗೆ ಕಾಯುತ್ತಿರಬೇಕು. ಅಭಿನಂದನೆಗಳು ಎಂದು ಹೇಳಿದರು.