ಉಪ್ಪಳ: ಕೇರಳ ಪ್ರದೇಶ್ ಶಾಲಾ ಶಿಕ್ಷಕರ ಸಂಘ (ಕೆ.ಪಿ.ಎಸ್.ಟಿ.ಎ) ರಾಜ್ಯ ಮಹಾಸಭೆಯ ಅಂಗವಾಗಿ ಮಂಜೇಶ್ವರ ಉಪಜಿಲ್ಲಾ ಸಮಾವೇಶ ಉಪ್ಪಳ ಮುಳಿಂಜ ಜಿ ಎಲ್ ಪಿ ಶಾಲೆಯಲ್ಲಿ ಭಾನುವಾರ ನಡೆಯಿತು. ಕಾಸರಗೋಡು ಜಿಲ್ಲಾ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಧ್ಯಕ್ಷ ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಲ್ಪಸಂಖ್ಯಾತ ಸೆಲ್ ಸಂಚಾಲಕಿ ಜಲಜಾಕ್ಷಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ರೆವೆನ್ಯೂ ಜಿಲ್ಲಾ ಜೊತೆಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಜಿಲ್ಲಾ ಜೊತೆ ಕಾರ್ಯದರ್ಶಿ ಜನಾರ್ಧನನ್ ಕೆ.ವಿ, ಶಿಕ್ಷಣ ಜಿಲ್ಲಾ ಅಧ್ಯಕ್ಷ ವಿಮಲ್ ಅಡಿಯೋಡಿ, ಮೂಡಂಬೈಲು ಶಾಲೆಯ ಮುಖ್ಯ ಶಿಕ್ಷಕ ಜೋರ್ಜ್ ಕ್ರಾಸ್ತ, ಮುಳಿಂಜ ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾವತಿ ಎಂ ಚಿಗುರುಪಾದೆ, ಸೌಮ್ಯ ಪಿ.ಕುಳೂರು, ಕಣ್ವತೀರ್ಥ ಜಿ.ಎಲ್.ಪಿ. ಶಾಲೆಯ ಮುಖ್ಯೋಪಾಧ್ಯಾಯ ಪದ್ಮನಾಭ, ಅಬ್ಸ ಟೀಚರ್, ಅಬೂಬಕ್ಕರ್ ಕುರುಡಪದವು ಮೊದಲಾದವರು ವಿವಿಧ ಅಧಿವೇಶನಗಳಲ್ಲಿ ಮಾತನಾಡಿದರು. ಉಪಜಿಲ್ಲಾ ಕಾರ್ಯದರ್ಶಿ ಒ.ಎಮ್. ರಶೀದ್ ಸ್ವಾಗತಿಸಿ, ಕೋಶಾಧಿಕಾರಿ ಪ್ರಸೀತ ಕುಮಾರಿ ವಂದಿಸಿದರು. ಈ ಶೈಕ್ಷಣಿಕ ವರ್ಷ ಸೇವೆಯಿಂದ ನಿವೃತ್ತಿಯಾಗುವ ಮುಖ್ಯೋಪಾಧ್ಯಾಯ ಪದ್ಮನಾಭ ಅವರನ್ನು..ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹೊಸತಾಗಿ ಸರ್ಕಾರಿ ಸೇವೆಗೆ ಸೇರಿದ ಉದ್ಯೋಗಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ನೂತನ ಶೈಕ್ಷಣಿಕ ವರ್ಷದ ಪದಾಧಿಕಾರಿಗಳಾಗಿಇಸ್ಮಾಯಿಲ್ ಮೀಯಪದವು (ಅಧ್ಯಕ್ಷ,) ಒ.ಎಮ್. ರಶೀದ್ (ಕಾರ್ಯದರ್ಶಿ), ಪ್ರಸೀತ ಕುಮಾರಿ (ಕೋಶಾಧಿಕಾರಿ)ಯಾಗಿ ಅಯ್ಕೆಗೂಂಡರು.